2. ಅನ್ನ ತಿಂದ ಮನೆಗೆ ಕನ್ನ ಹಾಕಬಾರದುಇದಲ್ಲದೆ ಹಲವು ಬಗೆಯ ಅಕ್ಕಿಗಳು ಇಲ್ಲವೆ ಅಕ್ಕಿಯ ಹಾಗೆ ಕಾಣುವ ಬೀಜ ಇಲ್ಲವೆ ದಾನ್ಯಗಳು ಇವೆ. ಕಿಟ್ಟೆಲ್ ಪದನೆರಕೆಯಿಂದ:-
ಅವಲಕ್ಕಿ = ಅವಲ್+ಅಕ್ಕಿ |
ಏಲಕ್ಕಿ = ಏಲ+ಅಕ್ಕಿ, ಯಾಲಕ್ಕಿ = ಯಾಲ+ಅಕ್ಕಿ(cardamom) |
ಬಿದಿರಕ್ಕಿ = ಬಿದಿರು+ಅಕ್ಕಿ |
ಸಬ್ಬಕ್ಕಿ = ಸಬ್ಬ(?)+ಅಕ್ಕಿ |
ಕುದಕಲಕ್ಕಿ = ಕುದಕಲ್+ಅಕ್ಕಿ, ಕುಸಲಕ್ಕಿ =ಕುಸಲ್+ಅಕ್ಕಿ |
ಬೆಣತಕ್ಕಿ = ಬೆಣತ್+ಅಕ್ಕಿ = ಬೆಳತ್+ಅಕ್ಕಿ ( ಬಿಳಿ ಅಕ್ಕಿ) |
ಕೇಸಕ್ಕಿ= ಕೇಸ್+ಅಕ್ಕಿ |
ನವಣೆಯಕ್ಕಿ, ಸಾಮೆಯಕ್ಕಿ, ಹಾರಕದಕ್ಕಿಹಾಗಾದರೆ ’ಅಕ್ಕಿ’ ಎಂಬ ಪದದ ಗುಟ್ಟೇನು ಎಂದು ನೋಡಿದಾಗ:-ಅರಿ+ಕೆ = ಅರಿಕೆ (ಅರಿ ಎಂಬ ಎಸಕಪದಕ್ಕೆ ’ಕೆ’ ಎಂಬ ಒಟ್ಟನ್ನು ಸೇರಿಸಿ ಅರಿಕೆ ಎಂಬ ಹೆಸರುಪದ ಮಾಡಲಾಗಿದೆ)ಅರಿ ಎಂಬುದಕ್ಕೆ ಕನ್ನಡದಲ್ಲಿ ’ತುಂಡು ಮಾಡು’, ’ಕತ್ತರಿಸು’ ಎಂಬ ಹುರುಳಿದೆ. Ka. ಅರಿ ari (ಅರಿದ್ arid-) to cut or lop off; n.cutting off, gnawing as vermin, a handful or more of corn cut at one stroke; ಅರಿಸು arisu to cause to cut off;ಅರಿವಾಳ್ arivāḷ, ಅರುವಾಳ್ aruvāḷ sickle.ಅಂದರೆ ಕುಡುಗೋಲು [DED 212]
1. ಸುರ್ಕು => ಸುಕ್ಕು, ಇರ್ಕು => ಇಕ್ಕು, ಉರ್ಕು => ಉಕ್ಕು, ಬೆರ್ಕು => ಬೆಕ್ಕು |
2. ಅರ್ಗಳ => ಅಗ್ಗಳ |
3. ಚುರ್ಚು => ಚುಚ್ಚು, ಮರ್ಚು=> ಮೆಚ್ಚು |
4. ಕರ್ತಲೆ => ಕತ್ತಲೆ |
5. ಉರ್ದು=> ಉದ್ದು, ಮರ್ದು => ಮದ್ದು |
ಮನೆ => ಮನಿ(house) – ಬಡಗು ಕರ್ನಾಟಕದಲ್ಲಿ ಮಾತ್ರ
ಬರೆ => ಬರಿ (write) – ತೆಂಕು ಮತ್ತು ಬಡಗು ಕರ್ನಾಟಕಇದೆಲ್ಲಕ್ಕು ಇಂಬು ಕೊಡುವಂತೆ ನಡುವಣ ದ್ರಾವಿಡ ನುಡಿಗುಂಪಿಗೆ ಸೇರಿದ
*ಕೊಲಾಮಿ ನುಡಿಯಲ್ಲಿ Kol. ark- (arakt-) to harvest ಅಂದರೆ ಕಟಾವು/ಸುಗ್ಗಿ ಮಾಡು [DED 212]
*ನೈಕಿ(ಚಂದ) ನುಡಿಯಲ್ಲಿ Nk. (Ch.) ark- to cut paddy, harvest ಅಂದರೆ ಬತ್ತವನ್ನು ಕಡಿ ಇಲ್ಲವೆ ಸುಗ್ಗಿ ಮಾಡು [DED 212]
ನೈಕಿ ನುಡಿಯಲ್ಲಿ ನೇರವಾಗಿ ’ಬತ್ತವನ್ನು ಕಡಿ’ ಎಂಬ ಹುರುಳೇ ಇರುವುದರಿಂದ, ಮೇಲೆ ಹೇಳಿರುವ ’ಅಕ್ಕಿ’ಯ ಪದಗುಟ್ಟಿಗೆ ಇನ್ನಶ್ಟು ಆನೆಬಲವನ್ನು ಒದಗಿಸುತ್ತದೆ. ಇಂಗ್ಲಿಶಿನ ’rice‘ ಕೂಡ ’ಅರಿಕೆ’(ಅರಿಸಿ arici) ಯಿಂದ ಬಂದಿರಬಹುದು.
1 Response
[…] = ಅವಲ್+ಅಕ್ಕಿ = ಬಡಿದ ಅಕ್ಕಿ, ಕುಟ್ಟಿದ ಅಕ್ಕಿ, ಅಮುಕಿದ […]