ನಿನ್ನಕ್ಕರೆಯು ದಕ್ಕದೆ ನನಗೆ ಬದುಕಿಲ್ಲ

– ರತೀಶ ರತ್ನಾಕರ.

bro-sis

ನೀ ಕಟ್ಟುತ್ತಿದ್ದ ಬಣ್ಣದ ದಾರ
ನೀ ನನ್ನ ತಂಗಿಯೆಂಬುದ ನೆನಪಿಸಲಲ್ಲ,
ತೋರಿಕೆಗೂ ಅಲ್ಲ
ಅದು ನಮ್ಮ ನಂಟಿನ ಗಂಟು
ಗಟ್ಟಿಯಾಗಿರಲೆಂಬುದರ ಗುರುತು

ನೆನಪಿನ ಪುಟದ ಮೊದಲ ಗೆಳತಿ
ನೀ ಅಡುಗೆ-ಗುಡುಗೆ ಆಟದ ಜೊತೆಗಾತಿ
ಒಡನೆ ಕಿತ್ತಾಡಿ
ಕೈ ತುತ್ತು ತಿಂದ ನಾಳೆನಿತೋ
ಮಾತುಬಿಟ್ಟು ಮತ್ತೆ ಒಟ್ಟಾದ ನೆನಪೆನಿತೋ

ಒಂದೇ ಮಡಿಲ ಕುಡಿಗಳು
ನಾವೆಂದಿಗೂ ಮಿಡಿಯುವೆವು
ನಮ್ಮೊಳಗಿನ ನೋವಿಗೂ ನಲಿವಿಗೂ

ಅಣ್ಣನ ಪಟ್ಟವ ಕಟ್ಟುತ್ತಲೇ ಇರು
ನಾ ಹೊತ್ತು ಬರುವ ಮರುಹುಟ್ಟಿನಲ್ಲೆಲ್ಲ
ಅದಾಗದಿದ್ದೊಡೆ
ಹಡೆದುಬಿಡು ನನ್ನ ಒಡಲ ಕೂಸಾಗಿ
ನಿನ್ನಕ್ಕರೆಯು ದಕ್ಕದೆ ನನಗೆ ಬದುಕಿಲ್ಲ

(ಚಿತ್ರಸೆಲೆ: lynnechapman.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sooper! touch agoithu 🙂

ಅನಿಸಿಕೆ ಬರೆಯಿರಿ: