ಗುದ್ದಲಿಯ ಹಿರಿಮೆ ಗೆಲ್ಲಲಿ!

 ಬರತ್ ಕುಮಾರ್.

ಅಗೆಅಗೆವ ಗುದ್ದಲಿಯ
ಬಗೆಬಗೆಯಲಿ ಬರೀ ಮಣ್ಣಲ್ಲ
ಹುಗಿಹುಗಿದ ತಿರುಳನು
ತೆಗೆತೆಗೆದು ಸುರುಳಿಯಲಿ
ತೋರುತಿದೆ ನೋಡೀ ಗುದ್ದಲಿ

ಹಳ್ಳ ತೋಡಿದ ಗುದ್ದಲಿ
ಹಳ್ಳವನೇ ತುಂಬುವುದಲ್ಲಿ
ಚಿಗುರುವುದಲ್ಲಿ ಹೊಸದೊಂದು
ಚಿಕ್ಕ ಮೊಳಕೆಯ ನೋಡಲ್ಲಿ

ಹೊಸತಿಗೆ ಓಗೊಡಲು
ಹಾತೊರೆಯುತಿರುವ ಮಣ್ಣಿಗೆ
ಹೆಗಲ ಕೊಡುತಿದೆ ನೋಡೀ ಗುದ್ದಲಿ
ಎನ್ನ ದುಡಿಮೆಗೆ ಒಡ್ಡಲಿ
ನಿನ್ನ ಹಿರಿಮೆ ಗೆಲ್ಲಲಿ
ಓ! ಗುದ್ದಲಿಯೇ! ನಿನ್ನ ಹಿರಿಮೆ ಗೆಲ್ಲಲಿ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: