ಕವಿತೆ: ಆಟವನು ಹೇಳಿಕೊಟ್ಟವರಾರು

– ವೆಂಕಟೇಶ ಚಾಗಿ.

ಕೇಳ್ವಿ, ಪ್ರಶ್ನೆ. ಯಾರು, Who, question

ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ
ಆಟವನು ಹೇಳಿಕೊಟ್ಟವರಾರು
ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ
ಆಟವನು ಹೇಳಿಕೊಟ್ಟವರಾರು

ಕಲ್ಲು ಮುಳ್ಳಿನ ಹಾದಿಯಲೂ
ಹೂವಿನ ಹಾಸಿಗೆಯನು ಹಾಸಿದೆ
ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ
ಆಟವನು ಹೇಳಿಕೊಟ್ಟವರಾರು

ಕಾಣದೂರಿನ ಪಯಣದಲಿ
ಕತೆಯೊಂದು ಮೌನವಾಗಿ ಸಾಗಿದೆ
ನೋವು ನಲಿವನು ತರಲಿರುವ ಗಂಟೆಗಳಿಗೆ
ಆಟವನು ಹೇಳಿಕೊಟ್ಟವರಾರು

ಹೊಸ ಉತ್ಸಾಹವನು
ಬಿತ್ತುವ ಸುಳ್ಳುಗಳು ನಗುತ್ತಲಿವೆ
ಜೀವನದ ಜಾಡಿಯಲ್ಲಿರುವ ಕತೆಗಳಿಗೆ
ಆಟವನು ಹೇಳಿಕೊಟ್ಟವರಾರು

ನೂರಾರು ದ್ರುಶ್ಯಗಳನು ಕಂಡ
ಕಣ್ಣುಗಳ ಕಾಂತಿ ತಂಪು ಸೂಸುತ್ತಿದೆ
ಚಾಗಿಯ ಸಂಗದಲ್ಲಿರುವ ಕವನಗಳಿಗೆ
ಆಟವನು ಹೇಳಿಕೊಟ್ಟವರಾರು

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ರಘುರಾಮ್ says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: