ಬೆಳಗಿನ ರಾಗ

– ವಲ್ಲೀಶ್ ಕುಮಾರ್.

Indian Mother and Child - Vintage Print
ನೇಸರನೊಲವಿಗೆ ಕಣ್ಣನು ತೆರೆದು
ಅಮ್ಮನ ಕಾಣದ ಕಂದ
ಹಾಸಿಗೆ ಮೇಲೆಯೇ ಅಳುತಾ ಕೂತನು
ಏಳುತ ಎಡಗಡೆಯಿಂದ.

ಮಂಚವನಿಳಿದು ಬಾಗಿಲ ಕಡೆಗೆ
ನಡೆಯುತ ಬರುತಿರುವಾಗ
ಆಟಿಕೆಯೊಂದು ಕಾಲಿಗೆ ಚುಚ್ಚಲು
ಹಾಡಿದ ನೋವಿನ ರಾಗ.

ಮುಸುರೆಯ ಕೈಯ್ಯನು ಸೆರಗಿಗೆ ಒರೆಸಿ
ಓಡುತ ಬಂದಳು ಗೌರಿ
ಬಿಕ್ಕಳಿಸುತ್ತಾ ನೋವನು ಹೇಳಿದ
ಗಣಪನು ಕಾಲನು ತೋರಿ.

ತಾವರೆ ದಳದಾ ಪಾದಕೆ ಮುತ್ತನು
ನೀಡುತ ನೋವಳಿಸಿದಳು
ಕಂದನ ಮಲಗಿಸಿ, ಬಲದಿಂದೆಬ್ಬಿಸಿ
ಶಿವನಿಗೆ ಕೈ ಮುಗಿಸಿದಳು.

(ಚಿತ್ರಸೆಲೆ: sproulegenealogy.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Awesome as always 🙂

Prashanth Vishwanath ಗೆ ಅನಿಸಿಕೆ ನೀಡಿ Cancel reply

Enable Notifications OK No thanks