ನೆತ್ತರನೊಯ್ದರು ಮೇಲಕೆ ಕೊಂಡು…

ಕಿರಣ್ ಬಾಟ್ನಿ.

Map_karnataka_flag

 

ಉತ್ತರ ಕರ‍್ನಾಟಕವನ್ನು ಬೇರೆ ರಾಜ್ಯ ಮಾಡಬೇಕು ಎನ್ನುತ್ತಿರುವ ಕನ್ನಡದ ಹಗೆಗಳಿಗೆ ನನ್ನದೊಂದು ಉತ್ತರ:

ನೆತ್ತರನೊಯ್ದರು ಮೇಲಕೆ ಕೊಂಡು
ಹತ್ತಿಯ ನೂಲನು ಸುತ್ತುತ ಬಂದು

ಎತ್ತರ ಎತ್ತರ ಎತ್ತರವೆಂದರು
ಹತ್ತಲು ಮರೆಯಿರಿ ಹೆತ್ತವಳನ್ನು

ಅತ್ತಣದಾಕೆಯ ಮಕ್ಕಳು ನೀವು
ಬತ್ತಲಿ ಹಳಬಳು ಗತ್ತೇನಿವಳದು

ಆಹಾ ಎತ್ತರ ಏನೀ ಎತ್ತರ
ಹುತ್ತವು ಎತ್ತಣವೆಂಬುದಕುತ್ತರ

ಕುತ್ತಿನ ದಿನದಲಿ ಹುತ್ತದ ನಂಜನು
ಬಿತ್ತಿರಿ ಮನೆಯಲಿ ಎನ್ನುವ ಎತ್ತರ

ಮತ್ತಿನ ಇರುಳಲಿ ಮುತ್ತಿನ ಸೂಳೆಯ
ಕತ್ತಿನ ಹಾರದ ನೇಣಿನ ಎತ್ತರ

ಕತ್ತಿಯ ಇರಿತವು ಹಗೆಗಳಿಗಲ್ಲ
ಹಿತ್ತಲ ತಮ್ಮನಿಗೋಸ್ಕರ, ಎತ್ತರ!

ನೆತ್ತರನೊಯ್ದರು ದಿಲ್ಲಿಗೆ ಕೊಂಡು
ಹತ್ತಿಯ ನೂಲನು ಸುತ್ತುತ ಬಂದು

(ಚಿತ್ರಸೆಲೆ: kn.wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: