ನೀನು ಇರದ ಬದುಕಲಿ ಇನ್ನೇನಿದೆ

ಶ್ರುತಿ ಪ್ರಬುಸ್ವಾಮಿ.

ontitana

 

ನೀನು ಇರದ ಬದುಕಲಿ ಇನ್ನೇನಿದೆ
ಕಾಲಿ ಹಾಳೆಗೂ ನಿನ್ನದೇ ಕನವರಿಕೆ
ಪದಗಳಿಗೂ ನೀನಿರದ ಬದುಕಿಗೆ ಬರಲು ಹೆದರಿಕೆ

ಬಿಳಿ ಹಾಳೆಗೆ ಜೀವ ತಂತು
ನಿನ್ನೆ ಬಾವನೆಗಳೆಂಬ ರಂಗಿನ ಇಂಕು
ಇಂದೇಕೊ ಅದು ಮಂಕು

ಜೀವನ ರತ ಬಂತೆಲ್ಲಿಗೆ
ಬಿಡಿಸಲಾಗದ ಒಗಟ ಹೊತ್ತು?!
ಜೋಡಿಯಾಗಿ ಸಾಗಬೇಕಿತ್ತದು

ಎರಡು ಹುಚ್ಚು ಮನಸೆಂಬ ಕುದುರೆಯೊಡನೆ
ಸಾರತಿಯಾಗಿದ್ದ ಒಂದೇ ಜೀವ
ಈಗ ಎರಡಾಗಿ ಹೋಳಾಗಿದೆ

ಏನಾಗಿದೆ,
ಇದೇನಾಗಿದೆ?
ಉತ್ತರವಿಲ್ಲದ ಅತಂತ್ರ ಸ್ತಿತಿ ಇದಾಗಿದೆ

 

( ಚಿತ್ರ ಸೆಲೆ:  jesicastephanie.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. grsprasanna says:

    ಚೆನ್ನಾಗಿದೆ. ಕಾಲಿ -ಖಾಲಿ ರತ-ರಥ ಬೇಕಂತಲೇ ಬರೆದದ್ದ

  2. Madhu says:

    @shru : ಅದ್ಭುತ ಪದಗಳ ಜೋಡಣೆ ಮತ್ತು ಪದಗಳ ಹಿಂದಿನ ಭಾವ (y)
    ಕಠಿಣವಾದದ್ದನ್ನ ಸರಳ ಮತ್ತು ಸುಂದರವಾಗಿ ಬರೆಯುವಲ್ಲಿ ನಿನ್ ಪ್ರಯತ್ನ ಯಶಸ್ವಿ 🙂 *ಚಪ್ಪಾಳೆ* 🙂

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *