ಮೈಸೂರ್ ಪಾಕ್ ಮಾಡುವ ಬಗೆ
– ಕಲ್ಪನಾ ಹೆಗಡೆ.
ಸಾಮಾನ್ಯವಾಗಿ ಮೈಸೂರ್ ಪಾಕ್ ಅಂದ್ರೆ ಬಾಯಲ್ಲಿ ನೀರು ಬರತ್ತೆ ಅಲ್ವಾ? ಆದರೆ ಎಶ್ಟೋ ಜನರಿಗೆ ತುಪ್ಪದಲ್ಲಿ ಮಾಡಿದ ಮೈಸೂರ್ ಪಾಕ್ ತಿನ್ನಲು ಹೆದರಿಕೆ! ಅದಕ್ಕೆ ತುಪ್ಪದ ಬದಲು ಎಣ್ಣೆಯಲ್ಲಿ ಮೈಸೂರ್ ಪಾಕ್ ಮಾಡೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಾದರೆ ಇಲ್ಲಿ ನೋಡಿ! ಮಾಡಿ! ತಿಂದು ನೋಡಿ!!
ಬೇಕಾಗುವ ಸಾಮಗ್ರಿಗಳು:
1 ಲೋಟ ಕಡ್ಲೆ ಹಿಟ್ಟು
1 ಲೋಟ ಅಡುಗೆ ಎಣ್ಣೆ ಅತವಾ 1 ಲೋಟ ತುಪ್ಪ
2 ಲೋಟ ಸಕ್ಕರೆ
ಮಾಡುವ ಬಗೆ:
ಮೊದಲು ಸಕ್ಕರೆಗೆ ಅರ‍್ದ ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ ನೀರಿನ ಪಾಕ ಮಾಡಿಕೊಳ್ಳಿ. ಬಳಿಕ ಕಡ್ಲೆಹಿಟ್ಟಿಗೆ ಸ್ವಲ್ಪ ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಆಮೇಲೆ ಸವಟಿನಿಂದ ಸ್ವಲ್ಪ ಸಕ್ಕರೆ ಪಾಕ, ಸ್ವಲ್ಪ ತುಪ್ಪ ಅತವಾ ಎಣ್ಣೆ ಹಾಕಿ ಕಲಸುತ್ತಾ ಇರಬೇಕು. ಸ್ವಲ್ಪ ಸ್ವಲ್ಪವಾಗಿ ಹಾಕಿ ಕಲಸುತ್ತಾ ಇರಿ. ಆಮೇಲೆ ಬಾಣಲೆಯಿಂದ ನೊರೆಯ ತರಹ ಮೇಲ್ಗಡೆ ಉಬ್ಬಿ ಬಂದಾಗ ಆ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ ಕತ್ತರಿಸಿ. ತಯಾರಿಸಿದ ಮೈಸೂರ್ ಪಾಕನ್ನು ತಟ್ಟೆಗೆ ಹಾಕಿ ಸವಿಯಲು ನೀಡಿ.
(ಚಿತ್ರ ಸೆಲೆ: cakechooser.com)
ಇತ್ತೀಚಿನ ಅನಿಸಿಕೆಗಳು