ಮೆಂತೆಸೊಪ್ಪಿನ ಗೊಜ್ಜು

ರೇಶ್ಮಾ ಸುದೀರ್.

ಮೆಂತೆಸೊಪ್ಪು

ಬೇಕಾಗುವ ಪದಾರ‍್ತಗಳು

ಮೆಂತೆಸೊಪ್ಪು ——– 2 ಕಟ್ಟು
ನೀರುಳ್ಳಿ ————- 3
ಬೆಳ್ಳುಳ್ಳಿ ————- 1 ಗೆಡ್ಡೆ
ಟೊಮೇಟೊ ——— 3
ದನಿಯಬೀಜ ——— 1 ಟೀ ಚಮಚ
ಅಚ್ಚಕಾರದ ಪುಡಿ —– 2 ಟೀ ಚಮಚ
ತೆಂಗಿನಕಾಯಿ ——– 1/2 ಬಾಗ
ಅರಿಸಿನ ————- ಚಿಟಿಕೆ
ಬಿಳಿಬೆಲ್ಲ ————- 1 ನಿಂಬೆಗಾತ್ರ
ಹುಣಸೆಹಣ್ಣು ——— 1 ಗೋಲಿ ಗಾತ್ರ
ಎಣ್ಣೆ —————-  2 ಟೇಬಲ್ ಚಮಚ
ಕರಿಬೇವಿನ ಸೊಪ್ಪು — ಸ್ವಲ್ಪ
ಉಪ್ಪು ————— ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೆಂತೆ ಸೊಪ್ಪನ್ನು ತೊಳೆದು ಹೆಚ್ಚಿಕೊಳ್ಳಿ. ಒಂದು ಬಾಣಲೆಯಲ್ಲಿ 2 ಟೀ ಚಮಚ ಎಣ್ಣೆ ಹಾಕಿ,ಅದಕ್ಕೆ ಹೆಚ್ಚಿದ ನೀರುಳ್ಳಿ,ಟೊಮಟೊ,ಬೆಳ್ಳುಳ್ಳಿ ಹಾಕಿ ಬಾಡಿಸಿ ನಂತರ ಮೆಂತೆ ಸೊಪ್ಪು ಹಾಕಿ ನೀರು ಆರುವವರೆಗೆ ಹುರಿಯಿರಿ, ತಣ್ಣಗಾಗಲು ಬಿಡಿ. ಇನ್ನೊಂದು ಕಾವಲಿಯಲ್ಲಿ 1 ಟೀ ಚಮಚ ಎಣ್ಣೆ ಹಾಕಿ ದನಿಯ ಬೀಜ ಮತ್ತು ಕಾರದ ಪುಡಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ತೆಂಗಿನಕಾಯಿ ತುರಿ, ಹುರಿದಿಟ್ಟ ಮೆಂತೆಸೊಪ್ಪಿನ ಮಿಶ್ರಣ, ಕಾರದಪುಡಿ ಮಿಶ್ರಣ, ಹುಣಸೆಹಣ್ಣು ಹಾಕಿ ರುಬ್ಬಿ ಕೊಳ್ಳಿ. ಒಂದು ದಪ್ಪ ತಳದ ಪಾತ್ರೆಗೆ 1 ಟೇಬಲ್ ಚಮಚ ಎಣ್ಣೆ ಹಾಕಿ, ಸಾಸಿವೆ ಹಾಕಿ ಸಿಡಿದ ಮೇಲೆ ಕರಿಬೇವಿನ ಸೊಪ್ಪು ಹಾಕಿ ರುಬ್ಬಿ ಕೊಂಡ ಮಿಶ್ರಣವನ್ನು ಹಾಕಿ ಕುದಿಸಿ. ರುಚಿಗೆ ತಕ್ಕಶ್ಟು ಉಪ್ಪು ಹಾಕಿ, ಬೆಲ್ಲ ಹಾಕಿ ಕುದಿಸಿ. ಮೆಂತೆ ಸೊಪ್ಪಿನ ಗೊಜ್ಜು ತಯಾರು. ಇದು ಅನ್ನ, ಚಪಾತಿ ಹಾಗೂ ರೊಟ್ಟಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Lata Pattar says:

    how many days can we keep this

ಅನಿಸಿಕೆ ಬರೆಯಿರಿ: