ಮುನಿಸಿಕೊಂಡಿದೆ ಮನ

ಹರ‍್ಶಿತ್ ಮಂಜುನಾತ್.

the silence

ಮುನಿಸಿ ಕೊಂಡಿದೆ ಮನದ ಕೋಗಿಲೆ
ಬರೆವಾ ಕಯ್ಗಳನೂ
ಬರಿದು ಮಾಡಿದೆ ಬರೆಯದಂತೆ
ಹರಿದಾ ಹಾಳೆಯನೂ

ಬಿಗಿದಿಹ ಕುಂಚ ಪದಗಳ ಕಡಲು
ಸುಡುತಿದೆ ಒಡಲನ್ನೂ
ಹುಟ್ಟುವ ಮೊದಲೇ ಸುಟ್ಟಾ ಸ್ವರವೂ
ಮೆಟ್ಟಿದೆ ನೆನಪನ್ನೂ

ಹಾಡಲು ಕಂಟವು ನಡುಗಿದೆ ಏಕೋ
ಮುರಿಯದೆ ಮವ್ನವನೂ
ಬರೆದು ಹರಿದೂ ಬಳಲಿದೆ ಜೀವಾ
ಮರೆಯಲಿ ದುಕ್ಕವನೂ

ಕನಸಿನ ಕವನವಿದು ಕನವರಿಕೆಯಲು
ಗುನುಗಿತ್ತು ಸಾಲುಗಳನೂ
ಬೊಗಸೆ ಹಿಡಿದು ಕಾದು ಕುಳಿತರು
ಅಣಿಗೊಳ್ಳದು ಮುನಿಸಿ ಕೊಂಡಿದೆ ಮನ

( ಚಿತ್ರಸೆಲೆ: thepeacefulthought.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Bhavani.br.naik says:

    ಮುನಿಸಿಕೂಂಡ ಮನದ ವರ್ಣನೆ ರೋಚಕ

Bhavani.br.naik ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *