ಹೊನಲು – ಎರಡು ವರುಶ ತುಂಬಿದ ನಲಿವು

ಕನ್ನಡಿಗರೆದೆಯಲಿ ಜಿನುಗುತಿದೆ ಅರಿವಿನ ಹನಿಗಳು
ಆ ಹನಿಗಳು ಸೇರಿ ಮೂಡಿದೆ ಚೆಲುವಿನ ಹೊನಲು
ಆ ಹೊನಲು ಸಾಗಿಬಂದಿದೆ ಎರಡು ವರುಶಗಳು
ಎಡಬಿಡದೆ ದುಡಿಯುತಿದೆ ಕನ್ನಡಿಗರ ನಾಳೆಗಳ ಕಟ್ಟಲು|
ಹೌದು, ಕನ್ನಡದಲ್ಲಿ ಹಿಂದೆಂದೂ ಇಂತಹದೊಂದು ಪ್ರಯತ್ನ ನಡೆದಿಲ್ಲ ಅಂದರೆ ತಪ್ಪಾಗಲಾರದು. ಎರಡು ವರುಶಗಳ ಹಿಂದೆ ಸೊಗಸಾದ ಬರಹಗಳಿಂದ ಮೂಡಿದ ಹೊನಲಿಗೆ, ಇಂದು ಸಾವಿರ ಸಾವಿರ ಮೆಚ್ಚುಗೆಗಳು, ಸಾವಿರಕ್ಕೂ ಮಿಗಿಲಾದ ಬರಹಗಳು, ಲಕ್ಶಕ್ಕೂ ಮೀರಿದ ನೋಟಗಳು. ಕನ್ನಡಿಗರ ಬದುಕನ್ನು ಹಸನಾಗಿಸಲು ಬೇಕಾದ ನುಡಿಯ ಗಟ್ಟಿ ತಳಹದಿಯನ್ನು ಕಟ್ಟಲು, ಹೊನಲಿನ ಜೊತೆ ಸೇರಿದ ಕೈಗಳೂ ನೂರಾರು! ಎರಡು ವರುಶಗಳನ್ನು ಪೂರೈಸಿರುವ ಈ ನಲಿವಿನ ಹೊತ್ತಿನಲ್ಲಿ ಹೊನಲಿನ ಬೆನ್ನುತಟ್ಟುತ್ತಿರುವ ಓದುಗರಿಗೂ, ಬರಹ ನೀಡುತ್ತಿರುವ ಬರಹಗಾರರಿಗೂ ಎದೆತುಂಬಿ ನನ್ನಿ ತಿಳಿಸಬಯಸುತ್ತೇವೆ! ಜಗತ್ತಿನೆಲ್ಲೆಡೆಯಿಂದ ಕನ್ನಡಿಗರನ್ನು ಸೆಳೆಯುತ್ತಿರುವ ಹೊನಲಿನ ಗೆಲುವನ್ನು ಹಂಚಿಕೊಳ್ಳುತ್ತ ಈ ಚಿಕ್ಕ ವಿಡಿಯೋ ಮಾಡಿದ್ದೇವೆ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: