ಸಹ್ಯಾದ್ರಿ

– ಬಸವರಾಜ್ ಕಂಟಿ.

Lonavala-hill-station

ಕದಿಯಬಹುದೇ ಕಣ್ಣಿನ ಹೊನ್ನನು
ಸಹ್ಯಾದ್ರಿಯ ಈ ಸೊಬಗನು
ಹಿಡಿಯಬಲ್ಲುದೆ ಮಿದುಳಿನ ಸಂಚಿಯು
ಇಂಗದ ಈ ಸಿರಿಯನು

ನೋಟ ನೋಟದಲ್ಲೂ ಹಸಿರ ಬಳಸಿ
ಹನಿ ಹನಿಯಲ್ಲೂ ಇನಿದನಿ ಬೆರೆಸಿ
ಮರ ಮರದಲ್ಲೂ ಕಂಪ ಕಲೆಸಿ
ನಿಂತಿದೆ ನೇಸರನನ್ನೇ ಮರೆಸಿ

ಮಂಜಿನ ಹೊಗೆಯ ಕುಲುಮೆಯಿಹುದು
ಯಾವ ಗುಟ್ಟು ಮುಚ್ಚಿಡಲೆಂದೋ
ಅಡಿಯಿಡಲು ಬಲು ತೊಡಕುಯಿಹುದು
ತನ್ನ ಏಕಾಂತತೆಯ ಕಾಯಲೆಂದೋ

ಚೆಲುವ ಬಲೆಗೆ ಮೋಡವ ಸೆಳೆದು
ಬೆರಗಿನ ಪ್ರಾಣಿಗಳ ಹಡೆದು
ಸಲುಹಿರುವೆ ದೇವರಿಗೂ ಮಿಗಿಲಾಗಿ
ನಿನ್ನೊಡಲ ಕುಡಿಗಳ ದಾಹ ತಣಿದು

ಪದಗಳ ಮೀರಿದ ನೆಮ್ಮದಿ ತರಿಸಿ
ಬದುಕ ಬವಣೆಯ ದೂರ ಮರೆಸಿ
ಕಣ್ಣ ಹುಟ್ಟಿಗೆ ಸಾರ‍್ತಕತೆಯ ಮಾಡಿ
ರಸಿಕರ ಮನಗಳಿಗೆ ದನ್ಯತೆಯ ನೀಡಿ

ತಾನಿರುವ ಎತ್ತರವ ಮೆರೆಸುತ
ತಿಳಿಸಿದೆ ಎನ್ನ ಎಡೆಯನ್ನು
ಕೋಟಿ ಜೀವಗಳ ತಾಯಿ ನೀನು
ಒಂದುಮಾಡಿಕೋ ಈ ಕಂದನನ್ನು

(ಚಿತ್ರ ಸೆಲೆ: indiatravelblog.net )

3 ಅನಿಸಿಕೆಗಳು

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: