ಬಾಡೂಟ – ಕೋಳಿ ಕಲ್ಲುಗುತ್ತಿಗೆ ಪ್ರೈ
ಕೋಳಿ ಕಲ್ಲುಗುತ್ತಿಗೆ (Gizzard)—1/2 ಕೆ. ಜಿ
ನೀರುಳ್ಳಿ—–1 ಗೆಡ್ದೆ
ಅಚ್ಚಕಾರದಪುಡಿ— 2 ಟಿ ಚಮಚ
ದನಿಯಪುಡಿ—1/2 ಟಿ ಚಮಚ
ಕಾಳುಮೆಣಸಿನ ಪುಡಿ—- 1/2 ಟಿ ಚಮಚ
ಅರಿಸಿನ ಪುಡಿ—–1/4 ಟಿ ಚಮಚ
ಸೊಯಾಸಾಸ್—-1 ಟೇಬಲ್ ಚಮಚ
ಎಣ್ಣೆ———–1 ಟೇಬಲ್ ಚಮಚ
ಮಾಡುವ ಬಗೆ:
ಮೊದಲು ಕೋಳಿ ಕಲ್ಲುಗುತ್ತಿಗೆಯನ್ನು ಚೆನ್ನಾಗಿ ತೊಳೆದು ಶುಚಿ ಮಾಡಿ ಸಣ್ಣ ತುಂಡು ಮಾಡಿ ಕೊಳ್ಳಿ. ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದ ನಂತರ ಹೆಚ್ಚಿದ ನೀರುಳ್ಳಿಯನ್ನು ಹಾಕಿ ಬಾಡಿಸಿ. ಉರಿಯನ್ನು ಸಣ್ಣಗೆ ಮಾಡಿ ಅಚ್ಚಕಾರದಪುಡಿ, ದನಿಯಪುಡಿ, ಕಾಳುಮೆಣಸಿನಪುಡಿ, ಅರಿಸಿನಪುಡಿ ಹಾಕಿ ಬಾಡಿಸಿ ನಂತರ ಸೊಯಾಸಾಸ್ ಹಾಕಿ ಚೆನ್ನಾಗಿ ಹುರಿಯಿರಿ. ಶುಚಿ ಮಾಡಿದ ಕಲ್ಲುಗುತ್ತಿಗೆಯನ್ನು ಹಾಕಿ ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ ಮುಚ್ಚಳ ಮುಚ್ಚಿ ಅದರಲ್ಲಿ ಮಾಂಸದ ನೀರು ಆರುವವರೆಗೆ ಬಿಡಿ, ನಂತರ ಒಂದು ಸಣ್ಣ ಲೋಟ ನೀರು ಹಾಕಿ. ನೀರು ಪೂರ ಆರಿದ ಮೇಲೆ ಇಳಿಸಿ. ಕೋಳಿ ಕಲ್ಲುಗುತ್ತಿಗೆ ಹುರುಕಲು ಸಿದ್ದ.
ಇತ್ತೀಚಿನ ಅನಿಸಿಕೆಗಳು