ನಿರ‍್ಮಾಣ ಕಾರ‍್ಮಿಕರು

– ಸುನಿಲ್ ಕುಮಾರ್.

construction-workers

“ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?”
ಎಂದು ಮಾತ್ರವಲ್ಲದೆ
“ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?”
ಎಂಬುದನ್ನೂ ಆಲೋಚನೆ ಮಾಡಿ.

ಬಿಸಿಲಲ್ಲಿ, ಮಳೆಯಲ್ಲಿ, ಚಳಿಯಲ್ಲಿ
ದೂಳಲ್ಲಿ, ಹೊಗೆಯಲ್ಲಿ, ಗಾಳಿಯಲ್ಲಿ
ಹಗಲು-ರಾತ್ರಿ ಎಂದೆನದೆ
ನಿರಂತರ ಶ್ರಮಿಸುವ ಶ್ರಮವೀರರು ಅವರು.

ಆಕಾಶದಂತ ಎತ್ತರದಲ್ಲಿ
ಬೂಮಿಯ ಒಳಗಡೆ
ತೊಂದರೆಗೆ ಹೆದರದೆ, ಪ್ರಾಣಕ್ಕೆ ಅಂಜದೆ
ಪ್ರತಿದಿನ ಬದುಕಿನ ಹೋರಾಟ ನಡೆಸುವ ಶ್ರಮವೀರರು ಅವರು.

ಊರಲ್ಲದ ಊರಲ್ಲಿ, ಬಂದುಗಳಿಂದ ದೂರದಲ್ಲಿ
ತನ್ನದಲ್ಲದ ಬಾಶೆಯಲ್ಲಿ, ಬೇರೆ ಪ್ರಾಂತದ ಊಟ ಉಂಡು
ಸಾಲದ ಕೋಣೆಯಲ್ಲಿ ತಂಗಿ, ಕಡಿಮೆ ಕರ‍್ಚು ಮಾಡಿ
ಮನೆಗೆ ಹಣ ಕಳಿಸುವುದೇ ಅವರ ಜೀವನದ ಗುರಿ!

ಆ ನಿರ‍್ಮಾಣ ಕಾರ‍್ಮಿಕರ ಶ್ರಮ ಪಲಿತವೇ
ನಮ್ಮ ಮನೆ, ಪ್ಲೈ ಓವರ‍್ಸ್, ಮೆಟ್ರೋಗಳು, ಮಾಲ್ ಗಳು, ಪ್ಯಾಕ್ಟರಿಗಳು – ಎಲ್ಲಾನು
ದೇಶದ ಜನತೆ, ನಾಯಕರು ಕನಸುಕಾಣುತ್ತಿರುವ
ನವ ಬಾರತವನ್ನು ಕಟ್ಟುವ, ಚಿಕ್ಕ ಚಿಕ್ಕ ಬ್ರಹ್ಮ ದೇವರು ಅವರು.

ಅವರು ಹೊರಗಡೆ, ಎಲ್ಲಾ ಕಾಲವು ಕಶ್ಟಪಟ್ಟರೆ
ನಾವು ನಾಲ್ಕು ಗೋಡೆಗಳ ಮದ್ಯೆ ಎಲ್ಲ ಕಾಲವೂ ಕ್ಶೇಮವಾಗಿ ಬದುಕುವುದು
ಅವರ ಶ್ರಮದಿಂದ ನಮಗೆ ಸುಕವಾಗುತ್ತಿದೆ ಎಂದು ಗುರುತುಸಿ ಗೌರವಿಸಿ.

“ತಾಜ್ ಮಹಲ್ ನಿರ‍್ಮಾಣಕ್ಕೆ ಕಲ್ಲು ಎತ್ತಿಕೊಟ್ಟ ಕೂಲಿಕಾರರ‍್ಯಾರು?”
ಎಂದು ಮಾತ್ರವಲ್ಲದೆ
“ನಿಮ್ಮ ಮಲಗುವ ಕೋಣೆಗೆ ಇಟ್ಟಗೆ ಎತ್ತಿಕೊಟ್ಟ ಹೆಂಗಸರ‍್ಯಾರು?”
ಎಂಬುದನ್ನೂ ಆಲೋಚನೆ ಮಾಡಿ.

(ಚಿತ್ರಸೆಲೆ: stlucianewsonline.com ) 

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.