ಕರಿಬೇವಿನ ಸೊಪ್ಪಿನ ಒಗ್ಗರಣೆ ಕೋಳಿ

ರೇಶ್ಮಾ ಸುದೀರ್.

Koli_Palya

ಬೇಕಾಗುವ ಪದಾರ‍್ತಗಳು:
ಕೋಳಿ — 1 ಕೆ.ಜಿ
ಅಚ್ಚಕಾರದಪುಡಿ — 4 ಟಿ ಚಮಚ
ದನಿಯಪುಡಿ —– 1 ಟಿ ಚಮಚ
ಶುಂಟಿ ಬೆಳ್ಳುಳ್ಳಿ ಪೇಸ್ಟ್ — 1 ಟಿ ಚಮಚ
ಸೊಯಾಸಾಸ್ — 3 ಟೇಬಲ್ ಚಮಚ
ವಿನಿಗರ್ —- 3 ಟೇಬಲ್ ಚಮಚ
ಕಿಚನ್ ಕಿಂಗ್ ಮಸಾಲ ಪುಡಿ — 1 ಟಿ ಚಮಚ
ಗರಂಮಸಾಲ ಪುಡಿ — 1/2 ಟೀ ಚಮಚ
ಬೇವಿನಸೊಪ್ಪು —— 4 ಕಟ್ಟು
ಅರಿಸಿನಪುಡಿ —– ಚಿಟಿಕೆ
ಎಣ್ಣೆ ———- 2 ಟೆಬಲ್ ಚಮಚ
ಉಪ್ಪು ರುಚಿಗೆ ತಕ್ಕಂತೆ

ಮಾಡುವ ಬಗೆ:

ಶುಚಿ ಮಾಡಿದ ಕೊಳಿ ಮಾಂಸವನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಉಪ್ಪು, ಅರಿಸಿನ, ಶುಂಟಿ ಬೆಳ್ಳುಳ್ಳಿ ಪೇಸ್ಟ್, ಕಾರದಪುಡಿ, ದನಿಯಪುಡಿ ಮತ್ತು ವಿನಿಗರ್ ಹಾಕಿ ಚೆನ್ನಾಗಿ ಕಲಸಿ 1 ಗಂಟೆ ನೆನೆಯಲು ಬಿಡಿ. ನಂತರ ಅದನ್ನು ಸಣ್ಣ ಉರಿಯಲ್ಲಿ ಬೇಯಲು ಇಡಿ. ನೀರು ಸೇರಿಸಬೇಡಿ. ಕೋಳಿ ಮಾಂಸದ ನೀರು ಬಿಟ್ಟು ಅದೇ ನೀರು ಆರುತ್ತಾ ಬರುವಾಗ ಅದಕ್ಕೆ ಕಿಚನ್ ಕಿಂಗ್ ಮಸಾಲ ಪುಡಿ, ಗರಂ ಮಸಾಲ ಮತ್ತು ಸೊಯಾಸಾಸ್ ಸೇರಿಸಿ ಸ್ವಲ್ಪ ತಿರುಗಿಸಿ. ನೀರು ಪೂರ ಆರಲಿ. ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಶುಚಿ ಮಾಡಿದ ಕರಿ ಬೇವಿನ ಸೊಪ್ಪನ್ನು ಕಾದ ಎಣ್ಣೆಗೆ ಹಾಕಿ, ಬೇವಿನ ಸೊಪ್ಪು ಎಣ್ಣೆಯಲ್ಲಿ ಗರಿ ಗರಿ ಆದ ನಂತರ ಅದನ್ನು ಕೋಳಿಗೆ ಹಾಕಿ ತಿರುಗಿಸಿ. ರುಚಿಯಾದ ಕರಿಬೇವಿನ ಸೊಪ್ಪಿನ ಒಗ್ಗರಣೆ ಕೋಳಿ ತಯಾರು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: