‘ದಾರಿ’ಗಳ ಕುರಿತು ಒಂದು ಕಿರುನೋಟ

ಎಂ.ಸಿ.ಕ್ರಿಶ್ಣೇಗವ್ಡ.

ನಾಡಿನ ಏಳಿಗೆಯಲ್ಲಿ ದಾರಿಗಳ ಪಾಂಗು ಹೆಚ್ಚಿನದು. ಬಾರತದಲ್ಲಿ 4,86,500 ಕಿ.ಮೀ, ಕನ್ನಡನಾಡಿನಲ್ಲಿ 75,124 ಕಿ.ಮೀ ಉದ್ದದ ದಾರಿಗಳು ಇವೆ. ದಾರಿಗಳನ್ನು ಅವುಗಳ ಉಪಯೋಗಕ್ಕೆ ತಕ್ಕಂತೆ, ಈ ಕೆಳಕಂಡಂತೆ ವಿಂಗಡಿಸಲಾಗಿದೆ.

(1) ರಾಶ್ಟ್ರೀಯ ಹೆದ್ದಾರಿ(National Highway): ಒಂದು ರಾಜ್ಯದ ಮುಕ್ಯ ಪಟ್ಟಣಗಳನ್ನು ಸೇರಿಸುವ/ಒಂದು ರಾಜ್ಯಕ್ಕಿಂತ ಹೆಚ್ಚಿನ ರಾಜ್ಯಗಳಲ್ಲಿ ಹಾದುಹೋಗುವ ದಾರಿ.

(2) ರಾಜ್ಯ ಹೆದ್ದಾರಿ(State Highway): ಒಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಗುವ ದಾರಿ.

(3) ಜಿಲ್ಲಾ ಮುಕ್ಯ ದಾರಿ(Major District Road): ಒಂದು ಜಿಲ್ಲೆಯ ತಾಲ್ಲೂಕು ನೆಲೆಗಳು, ಮುಕ್ಯ ಊರುಗಳನ್ನು ಸೇರಿಸುವ ದಾರಿ.

(4) ಇತರೆ ಜಿಲ್ಲಾ ಮುಕ್ಯ ದಾರಿ(Other District Road): ತಾಲ್ಲೂಕಿನ ಹರವಿನಲ್ಲಿ ಇರುವ ದಾರಿ.

(5) ಹಳ್ಳಿ ದಾರಿ(Village Road): ಹಳ್ಳಿಗಳನ್ನು ಸೇರಿಸುವ ಚಿಕ್ಕ ದಾರಿ.

ಮಂದಿ, ಬಂಡಿಗಳು ಹಾಯಲು ಬಳಸುವ ದಾರಿಯ ಬಾಗಗಳನ್ನು ಈ ಕೆಳಕಂಡಂತೆ ಹೆಸರಿಸಲಾಗಿದೆ.

Road1(1) ಹಾಯುವ ಜಾಡು(carriage way)

(2) ತೋಳುಗಳು(shoulders)

(3) ಪಕ್ಕೆಗಳು (berm)

(4) ಚರಂಡಿಗಳು(drains)

ದಾರಿಗಳಲ್ಲಿ ಬಂಡಿಗಳು ಓಡಲು ಬಳಸುವ ಅಗಲವನ್ನು ಹಾಯುವ ಜಾಡು ಎಂದು, ಹಾಯುವ ಜಾಡಿನ ಬದಿಗಳನ್ನು ತೋಳು ಮತ್ತು ಚರಂಡಿಗಳ ನಡುವಿನ ಅಗಲವನ್ನು ಪಕ್ಕೆಗಳು ಎನ್ನಲಾಗಿದೆ.

 

ಸಂಚಾರ ದಟ್ಟಣೆ(traffic density)ಯನ್ನು ಎಣಿಕೆಗೆ ಹಿಡಿದು ದಾರಿಯ ಹಾಯುವ ಜಾಡಿನ ಅಗಲವನ್ನು ತೀರ‍್ಮಾನಿಸಲಾಗುತ್ತದೆ. ಹಾಗೆಯೇ ಸಂಚಾರ ದಟ್ಟಣೆಯನ್ನು ತಿಳಿಯಲು ಬಂಡಿ ದಟ್ಟಣೆ ಬಿಡಿ (Passenger Car Unit – PCU) ಎಂಬ ಅಳತೆಗೋಲನ್ನು ಬಳಸಲಾಗುತ್ತದೆ.

ಕೆಲವು ಬಂಡಿಗಳ ‘ಬಂಡಿ ದಟ್ಟಣೆ ಬಿಡಿ‘ ಈ ಕೆಳಗಿನಂತಿವೆ;
Road3

ಸಂಚಾರ ದಟ್ಟಣೆ ಮತ್ತು ಬಂಡಿ ದಟ್ಟಣೆ ಬಿಡಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ಕೆಳಗಿನ ಜಾಡುಗಳನ್ನು ವಿಂಗಡಿಸಲಾಗುವುದು.

(1) ಒಂಟಿ ಜಾಡು(single lane)- ಹಾಯುವ ಜಾಡಿನ ಅಗಲ 3.75 ಮೀ. ಮತ್ತು ಬಂಡಿ ದಟ್ಟಣೆ ಬಿಡಿಯು 2500 ರವರೆಗೆ ಇರುತ್ತದೆ.

(2) ನಡು ಜಾಡು(intermediate lane)- ಹಾಯುವ ಜಾಡಿನ ಅಗಲ 5.50 ಮೀ. ಮತ್ತು ಬಂಡಿ ದಟ್ಟಣೆ ಬಿಡಿಯು 2500-5000 ರವರೆಗೆ ಇರುತ್ತದೆ.

(3) ಜೋಡಿ ಜಾಡು(double lane)- ಹಾಯುವ ಜಾಡಿನ ಅಗಲ 7.00/7.50 ಮೀ. ಮತ್ತು ಬಂಡಿ ದಟ್ಟಣೆ ಬಿಡಿಯು 5000-10000 ರವರೆಗೆ ಇರುತ್ತದೆ.

(4) ಹಲ ಜಾಡು (multi lane)- ಹಲವು ಹಾಯುವ ಜಾಡುಗಳಲ್ಲಿ ಒಂದು ಜಾಡಿನ ಅಗಲ 3.50 ಮೀ. ಮತ್ತು ಬಂಡಿ ದಟ್ಟಣೆ ಬಿಡಿಯು 10000 ಕ್ಕಿಂತ ಹೆಚ್ಚಿರುತ್ತದೆ.

ದಾರಿಯಲ್ಲಿ ಓಡಾಡುವ ಬಂಡಿಗಳ ಗಾಲಿ ತೂಕ(wheel load)ವನ್ನು ಲೆಕ್ಕಕ್ಕೆ ಹಿಡಿದು ನೆಲದ ಕ್ಯಾಲಿಪೋರ‍್ನಿಯ ಬೇರಿಂಗ್ ರೇಶಿಯೊ ಎಂಬ ಅಳತೆಗೋಲನ್ನು ಬಳಸಿ ಈ ಕೆಳಕಂಡ ಪದರುಗಳನ್ನು ಹಾಕಿ ದಾರಿಯನ್ನು ಕಟ್ಟಲಾಗುತ್ತದೆ.

Road2

(1) ತಳ ಅಡಿಪಾಯ(sub base): ತಳ ಅಡಿಪಾಯಕ್ಕೆ ನೆಲದಲ್ಲಿ ಸಿಗುವ ಮಣ್ಣನ್ನು, ಬಳಸಲಾಗುತ್ತದೆ.

(2) ಅಡಿಪಾಯ(base): ಅಡಿಪಾಯಕ್ಕೆ ಜೆಲ್ಲಿಯನ್ನು, ಬಳಸಲಾಗುತ್ತದೆ.

(3) ಹೊದಿಕೆ ಪದರ(wearing course): ಹೊದಿಕೆ ಪದರಕ್ಕೆ ಸಣ್ಣ ಜೆಲ್ಲಿಕಲ್ಲು, ಕಲ್ಲರಗನ್ನು(Asphalt) ಬಳಸಲಾಗುತ್ತದೆ.

ದಾರಿಯ ಮೇಲೆ ಬಿದ್ದ ಮಳೆನೀರು ಸರಾಗವಾಗಿ ಹರಿದು ಚರಂಡಿ ಸೇರುವಂತೆ ನೀರಿಳಿಜಾರು(camber), ದಾರಿಯ ತಿರುವುಗಳಲ್ಲಿ ಬಂಡಿಯ ಉರುಬನ್ನು ಕಾಯ್ದುಕೊಳ್ಳಲು ಉರುಬಿನ ಏರು(super elevation) ಇರುವಂತೆ ಪದರಗಳನ್ನು ಕಟ್ಟಲಾಗುತ್ತದೆ.

ಪಕ್ಕೆಗಳನ್ನು ಒರಟು ಮಣ್ಣನ್ನು ಬಳಸಿ ಗಟ್ಟಿಗೊಳಿಸಲಾಗುತ್ತದೆ. ಚರಂಡಿಗಳನ್ನು ದಪ್ಪ ಕಲ್ಲು/ಗಟ್ಟಿಗಾರೆ(Concrete) ಬಳಸಿ ಕಟ್ಟಲಾಗುತ್ತದೆ. ಪಕ್ಕೆಗಳ ಅಗಲವನ್ನು ನೋಡಿ ಗಿಡ ಮರಗಳನ್ನು ಬೆಳಸಲು ಬಳಸಲಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: