ಕೋಳಿಕಾಲು ಪ್ರೈ ಮಾಡುವ ಬಗೆ

ರೇಶ್ಮಾ ಸುದೀರ್.

Legpiece
ಕೋಳಿಕಾಲು (chicken leg piece)——1/2 ಕೆ.ಜಿ (6 ಬರುತ್ತದೆ)
ನೀರುಳ್ಳಿ——-3
ಶುಂಟಿ, ಬೆಳ್ಳುಳ್ಳಿ ಪೇಸ್ಟ್ – 1 ಟಿ ಚಮಚ
ಟೊಮಟೊ—–1 (ದೊಡ್ಡದು)
ಅಚ್ಚಕಾರದಪುಡಿ–5 ಟಿ ಚಮಚ
ವಿನಿಗರ‍್——2 ಟಿ ಚಮಚ
ಅರಿಸಿನ——1/4 ಟಿ ಚಮಚ
ಸೊಯಾಸಾಸ್–2 ಟಿ ಚಮಚ
ಗರಮ್ ಮಸಾಲ–1/4 ಟಿ ಚಮಚ
ಎಣ್ಣೆ

ಮಾಡುವ ವಿದಾನ:

ಶುಚಿ ಮಾಡಿದ ಕೋಳಿಕಾಲಿಗೆ ಚಾಕುವಿನಿಂದ ಗೀರುಗಳನ್ನು ಹಾಕಿಕೊಂಡು ಅರಿಸಿನ, ಉಪ್ಪು, ವಿನಿಗರ್, ಅಚ್ಚಕಾರದ ಪುಡಿ 3 ಚಮಚ, ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ 1 ಗಂಟೆ ಇಡಿ. 2 ನೀರುಳ್ಳಿಯನ್ನು ಹೆಚ್ಚಿ ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಅದೇ ರೀತಿ ಟೊಮಟೊ ಕೊಡ ಪೇಸ್ಟ್ ಮಾಡಿಟ್ಟುಕೊಳ್ಳಿ. ಅಗಲ ತಳದ ಕುಕ್ಕರ್ ಗೆ 4 ಚಮಚ ಎಣ್ಣೆಹಾಕಿ, 1 ನೀರುಳ್ಳಿಯನ್ನು ಹೆಚ್ಚಿಕೊಂಡು ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಕಲಸಿಟ್ಟ ಕೋಳಿಯನ್ನು ಹಾಕಿ ನಿದಾನವಾಗಿ ಹುರಿಯಿರಿ.

ಇನ್ನೊಂದು ದಪ್ಪ ತಳದ ಬಾಣಲೆಗೆ 3 ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಮೊದಲು ನೀರುಳ್ಳಿ ಪೇಸ್ಟ್ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ನಂತರ ಟೊಮಟೊ ಪೇಸ್ಟ್ ಹಾಕಿ ಹುರಿಯಿರಿ, ಇದಕ್ಕೆ ಇನ್ನು ಉಳಿದ ಅಚ್ಚಕಾರದ ಪುಡಿ(2 ಚಮಚ), ಸೋಯಾಸಾಸ್ ಹಾಕಿ, ಗರಮ್ ಮಸಾಲ ಹಾಕಿ ಎಣ್ಣೆ ಮೇಲೆ ಬರುವವರೆಗೆ ಹುರಿಯಿರಿ. ಇದನ್ನು ಕುಕ್ಕರ್ ನಲ್ಲಿ ಇರುವ ಕೋಳಿಗೆ ಹಾಕಿ, ಸಲ್ಪ ನೀರು ಹಾಕಿ ಮುಚ್ಚಳ ಮುಚ್ಚಿ 1 ವಿಶಲ್ ಬರಿಸಿ. ಮುಚ್ಚಳ ತೆಗೆದ ನಂತರ ರುಚಿ ನೋಡಿ ಉಪ್ಪು ಬೇಕೆನಿಸಿದರೆ ಹಾಕಿ ಸಣ್ಣ ಉರಿಯಲ್ಲಿ ಮಸಾಲೆ ಸಲ್ಪ ಗಟ್ಟಿಯಾಗಲು ಬಿಡಿ. ಕೋಳಿ ಕಾಲನ್ನು ಸಲ್ಪ ಅಚೆ ಈಚೆ ತಿರುಗಿಸಿ ಮಸಾಲ ಅಂಟಿಕೊಳ್ಳುವಂತೆ ಮಾಡಿ. ಕೋಳಿಕಾಲು ಪ್ರೈ ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: