ಅಮೇರಿಕಾ ‘ಅಂಕಲ್ ಸ್ಯಾಮ್’ ಆಗಿದ್ದು ಹೇಗೆ?

ಕಿರಣ್ ಮಲೆನಾಡು.

Uncle Sam

ನ್ಯೂಯಾರ‍್ಕಿನ ಟ್ರಾಯ್ ಎಂಬಲ್ಲಿ ಸ್ಯಾಮ್ಯುಯೆಲ್ ವಿಲ್ಸನ್(Samuel Wilson) ಎಂಬ ಬಾಡಿನ ವ್ಯಾಪಾರಿ ಇದ್ದರು. 1812ರಲ್ಲಿ ಅಮೆರಿಕಾದಲ್ಲಿ ನಡೆದ ಕಾಳಗದ ಹೊತ್ತಿನಲ್ಲಿ ಸ್ಯಾಮ್ಯುಯೆಲ್ ವಿಲ್ಸನ್ ಅವರು ದೊಡ್ಡ ಪೆಟ್ಟಿಗೆಗಳಲ್ಲಿ ದನದ ಬಾಡನ್ನು(beef) ಕಾಳಗ ಪಡೆಗಳಿಗೆ(army) ಪೂರೈಕೆ ಮಾಡುತ್ತಿದ್ದರು. ಈ ಬಾಡಿನ ಪೆಟ್ಟಿಗೆಗಳಿಗೆ “ಯು.ಎಸ್“(U.S) ಎಂದರೆ ‘ಅಮೇರಿಕಾ ಒಕ್ಕೂಟ(United States)’ ಎಂದು ಇವರು ಅಚ್ಚು ಹಾಕುತ್ತಿದ್ದರು. ಆದರೆ ಕಾಳಗ ಪಡೆಯವರು ಇದನ್ನು “ಅಂಕಲ್ ಸ್ಯಾಮ್ (U.S-Uncle Sam)” ಎಂದು ಬೇರೆಯದಾಗಿ ಗುರುತಿಸತೊಡಗಿದರು! ಇದು ಹಲವು ತಿಂಗಳುಗಳ ಕಾಲ ನಡೆಯಿತು. ಯು.ಎಸ್. ಗೂ ಅಂಕಲ್ ಸ್ಯಾಮ್ ಗೂ ಇರುವ ನಂಟಿನ ಕತೆಯನ್ನು ಸುದ್ದಿಹಾಳೆಗಳೂ ಬಿತ್ತರಿಸತೊಡಗಿದವು. ಆಗ ಇದು ಹೆಚ್ಚು ಮಂದಿಮೆಚ್ಚುಗೆಯನ್ನು ಪಡೆಯುತ್ತಾ ಹೋಯಿತು. ಕೊನೆಗೆ 1813 ರ ಸೆಪ್ಟೆಂಬರ್ 7 ರಂದು ಅಮೇರಿಕಾ ಒಕ್ಕೂಟವು ‘ಅಂಕಲ್ ಸ್ಯಾಮ್’ ಎಂಬ ಅಡ್ಡ ಹೆಸರನ್ನು ಪಡೆದುಕೊಳ್ಳುವಶ್ಟು ಮಂದಿಮೆಚ್ಚುಗೆಯನ್ನು ಇದು ಪಡೆಯಿತು!

ಸರಿಸುಮಾರು 1860- 1870ರಲ್ಲಿ ತಾಮಸ್ ನಸ್ಟ್ (1840-1902 ಕ್ರಿ.ಶ) ಎಂಬ ರಾಜಕೀಯ ಅಲ್ಲಣಿತಿಟ್ಟಗಾರರು (political cartoonist) ‘ಅಂಕಲ್ ಸ್ಯಾಮ್’ ಎಂಬ ಹೆಸರನ್ನು ಉತ್ತುಂಗಕ್ಕೇರಿಸಿದರು. ನಸ್ಟ್ ಅವರು ತನ್ನದೇ ಊಹೆಯಲ್ಲಿ ‘ಅಂಕಲ್ ಸ್ಯಾಮ್’ ತಿಟ್ಟವನ್ನು ಹುಟ್ಟುಹಾಕಿದರು. ಅದರಲ್ಲಿ ಬಿಳಿಗಡ್ಡ ಮತ್ತು ಬಾನಚುಕ್ಕಿ ಪಟ್ಟಿಯುಳ್ಳ ನಿಲುವಂಗಿಯನ್ನು(stars-and-stripes suit) ಅಂಕಲ್ ಸ್ಯಾಮ್ ಹೆಸರಿಗೆ ತಳುಕಿಸಿದರು. ಜರ‍್ಮನಿ ಮೂಲದ ನಸ್ಟ್ ತಿಟ್ಟ ಬಿಡಿಸುವುದರಲ್ಲಿ ಎತ್ತಿದ ಕೈ. ಹೊಸ ತರವಾದ ಸಂತಾ-ಕ್ಲಾಸ್ ತಿಟ್ಟ, ಡೆಮಾಕ್ರಟಿಕ್ ಪಕ್ಶಕ್ಕೆ ಕತ್ತೆ ಗುರುತು ಮತ್ತು ರಿಪಬ್ಲಿಕನ್ ಪಕ್ಶಕ್ಕೆ ಆನೆಗುರುತು ಕೊಟ್ಟ ಹೆಗ್ಗಳಿಕೆ ಈ ನಸ್ಟ್ ಅವರಿಗೆ ಸಲ್ಲುತ್ತದೆ. ನಸ್ಟ್ ಅವರ ಇನ್ನೊಂದು ಹೆಗ್ಗಳಿಕೆಯೆಂದರೆ ನ್ಯೂಯಾರ‍್ಕಿನಲ್ಲಿರುವ ಟ್ಯಾಮ್ಮನಿ ಹಾಲ್ ನಲ್ಲಿ ನಡೆದ ಲಂಚಗುಳಿತನದ ಮೇಲೆ ಗೇಲಿಬರಹವನ್ನು ಬರೆದಿದ್ದು. ಈ ಗೇಲಿಬರಹವು ಅಲ್ಲಿನ ಮೇಲುಗರಾದ ವಿಲಿಯಂ ಟ್ವೀಡ್ ಅವರನ್ನು ಆಡಳಿತದಿಂದ ಕೆಳಗಿಳಿಯುವಂತೆ ಮಾಡಿತ್ತು.

ಮುಂದೆ ಅಂಕಲ್ ಸ್ಯಾಮ್ ಎಂಬ ಹೆಸರಿಗೆ ದೊಡ್ಡ ಮಟ್ಟದ ನಿಲುವನ್ನು ಕೊಟ್ಟಿದ್ದು ಅಲ್ಲಿನ ತಿಟ್ಟಗಾರ ಜೇಮ್ಸ್ ಮನ್‍ಗಮರಿ ಪ್ಲಾಗ್ (James Montgomery Flagg). ಉದ್ದನೆಯ ಟೊಪ್ಪಿ, ನೀಲಿ ಮೇಲಂಗಿಯನ್ನು ಹಾಕಿ ನೇರ ನೋಟವನ್ನು ಬೀರುತ್ತಿರುವಂತೆ ‘ಅಂಕಲ್ ಸ್ಯಾಮ್’ ತಿಟ್ಟವನ್ನು ಪ್ಲಾಗ್ ಬಿಡಿಸಿದರು. ಈ ತಿಟ್ಟ ಮಂದಿಮೆಚ್ಚುಗೆಯನ್ನು ಪಡೆಯಿತು. ಮೊದಲನೇ ವಿಶ್ವ ಕಾಳಗದ ಕೆಲಸದರಕೆಯ ಬಯಲರಿಕೆಯಲ್ಲಿ (recruitment advertisement) ಸ್ಯಾಮ್ ಅವರ ತಿಟ್ಟ ಜೊತೆಗೆ ‘ನೀನು ಅಮೇರಿಕಾ ಕಾಳಗ ಪಡೆಗೆ ಸೇರಬೇಕು ಎಂದು ನಾನು ಬಯಸುತ್ತೇನೆ” ಎಂಬ ಸಾಲನ್ನು ಸೇರಿಸಲಾಗಿತ್ತು. ಈ ತಿಟ್ಟವು ಬಹಳ ಮೆಚ್ಚುಗೆ ಪಡೆದುಕೊಂಡಿತ್ತು. ಮೊದಲಬಾರಿಗೆ (1916 ರಲ್ಲಿ) ಲೆಸ್ಲಿ ಎಂಬ ವಾರದ ಸುದ್ದಿಹಾಳೆಯಲ್ಲಿ ‘ಅಣಿಯಾಗುವುದಕ್ಕೆ ಏನು ಮಾಡುತ್ತಿದ್ದೀರಾ?’ ಎಂಬ ತಲೆಬರಹದೊಂದಿಗೆ ಅಂಕಲ್ ಸ್ಯಾಮ್ ನ ತಿಟ್ಟವನ್ನು ಅಚ್ಚಿಸಿತ್ತು. ಅಂಕಲ್ ಸ್ಯಾಮ್ ಇರುವ ಈ ಗೋಡೆತಿಟ್ಟವನ್ನು(poster) ಹಲವಾರು ಬಗೆಯಲ್ಲಿ ಬಿತ್ತರಿಸಲಾಯ್ತು. ಹೀಗೆ ಅಂಕಲ್ ಸ್ಯಾಮ್ ಮನೆಮನೆ ಮಾತಾದರು.

ಸೆಪ್ಟೆಂಬರ್ 1961ರಲ್ಲಿ, ಯು.ಎಸ್ ಕಾಂಗ್ರೆಸ್ಸಿನವರು ಸ್ಯಾಮ್ಯುಯೆಲ್ ವಿಲ್ಸನ್ ಅವರನ್ನು ‘ಅಮೇರಿಕಾ ನಾಡಿನ ಗುರುತಾದ ಅಂಕಲ್ ಸ್ಯಾಮ್ ನ ಮೊದಲಾಳು(progenitor)’ ಎಂದು ಗುರುತಿಸಿದರು. ವಿಲ್ಸನ್ ಅವರು 1854ರಲ್ಲಿ ತೀರಿಕೊಂಡಾಗ ಅವರಿಗೆ 88 ವರುಶ ವಯಸ್ಸಾಗಿತ್ತು. ಸ್ಯಾಮ್ ಅವರ ದೇಹವನ್ನು ಓಕ್‍ವುಡ್ ಸುಡುಗಾಡಿನಲ್ಲಿ ಮಣ್ಣುಮಾಡಲಾಗಿದೆ. ಇವರ ಸಮಾದಿಯ ಪಕ್ಕದಲ್ಲೇ ಇವರ ಮಡದಿ ಬೆಟ್ಸೆ ಮನ್ ಅವರ ಸಮಾದಿಯೂ ಇದೆ. ಈ ಜಾಗವಿರುವ ಪಟ್ಟಣವನ್ನು ‘ಅಂಕಲ್ ಸ್ಯಾಮ್ ಅವರ ನೆಲೆ‘ ಎಂಬ ಹೆಸರಿನಿಂದ ಈಗಲೂ ಕರೆಯುತ್ತಾರೆ.

(ಮಾಹಿತಿ ಸೆಲೆ: history.com)
(ಚಿತ್ರ ಸೆಲೆ: wikimedia)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , , , , , ,

1 reply

  1. Interesting

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s