ಮಂದಿಯ ಏಳಿಗೆಗೆ ದುಡಿಯುವ ಈ ಕೆಲಸದ ಹಿನ್ನಲೆ ಏನು?

ವಿಜಯಮಹಾಂತೇಶ ಮುಜಗೊಂಡ.

OLYMPUS DIGITAL CAMERA

 

ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಸರಳ ವಿವರ ತಿಳಿದಿರುವೆವು. ಈ ಬರಹದಲ್ಲಿ ಕೂಡಣದ ಹೊಸಜಂಬಾರಿಕೆಯು ವಾಡಿಕೆಯ(conventional) ಹೊಸಜಂಬಾರಿಕೆಗೆ ಹೇಗೆ ಬಿನ್ನವಾಗಿದೆ? ಇದರ ಹಳಮೆಯೇನು? ಇಂದಿನ ನಾಡುಗಳಲ್ಲಿ ಕೂಡಣದ ಹೊಸಜಂಬಾರಿಕೆಯ ನಡೆ ಹೇಗಿದೆ? ಎಂಬ ವಿವರಗಳನ್ನು ನೋಡೋಣ.

ವಾಡಿಕೆಯ ಹೊಸಜಂಬಾರಿಕೆ ಮತ್ತು ಕೂಡಣದ ಹೊಸಜಂಬಾರಿಕೆಯ ಬೇರ‍್ಮೆ
ಮೇಲ್ನೋಟಕ್ಕೆ ಈ ಎರಡು ಹೊಸಜಂಬಾರಿಕೆಗಳ ನಡುವೆ ಹಲವು ಬೇರ‍್ಮೆಗಳು ಕಂಡರೂ ಅವುಗಳ ಮೂಲ ಎಣಿಕೆ(basic concept)ಯ ವಿಶಯದಲ್ಲಿ ತುಂಬಾ ಹೋಲಿಕೆಯಿದೆ. ಇಲ್ಲಿ ನಾವು ಹೊಸಜಂಬಾರಿಕೆಯ ಹುರುಳುಗಳನ್ನು ಅರಿಯುವುದು ಅವಶ್ಯಕವಾಗಿದೆ. ಪ್ರೆಂಚ್ ಪುರುಳರಿಗ ಜ್ಯಾನ್-ಬ್ಯಾಪಿಸ್ಟ್ ಸೆ (Jean-Baptiste Say) ಹೇಳುವಂತೆ ಕೂಡಣದ ಬಗೆಯನ್ನು ಬದಲಿಸುವ ಹೊಳಹು(idea) ಮತ್ತು ಮುನ್ನೋಟ(perspective)ವನ್ನು ಹೊಂದಿರುವವನೇ ಕೂಡಣದ ಹೊಸಜಂಬಾರಿಗ. ಇನ್ನೊಂದು ಹುರುಳಿನಂತೆ ಅಮೆರಿಕೆಯ ಒಬ್ಬ ಆಡಳಿತ ಸಲಹೆಗಾರ ಪೀಟರ್ ಡ್ರಕ್ಕರ‍್(Peter Drucker) ಹಣಕಾಸಿನೇರ‍್ಪಾಡಿನ ಸೊಮ್ಮನ್ನು(economy) ಬೆಳೆಸಿ ಆದಾಯದ ಹೆಚ್ಚಿನ ಇಳುವರಿಯೆಡೆಗೆ ಒಯ್ಯುವವನು ಹೊಸಜಂಬಾರಿಗ ಎಂದು ಹೇಳುತ್ತಾರೆ. ಈ ಎರೆಡು ಹುರುಳುಗಳಿಂದ ನಾವು ಹೊಸಜಂಬಾರಿಗ ಎಂದರೆ ಏನೆಂದು ತಿಳಿಯಬಹುದು.

ಕೂಡಣದ ಹೊಸಜಂಬಾರಿಕೆ ಪದದ ಹುಟ್ಟಿನ ಮೂಲದಿಂದ ಇವೆರೆಡರ ಬೇರ‍್ಮೆಯನ್ನು ಅರಿಯಬಹುದು. ವಾಡಿಕೆಯ ಹೊಸಜಂಬಾರಿಗರು ಆದಾಯದ ಮೂಲವನ್ನು ನೋಡಿದರೆ ಕೂಡಣದ ಹೊಸಜಂಬಾರಿಗರು ಮೂಲವಾಗಿ ಕೂಡಣದ ಏಳ್ಗೆಯನ್ನು ಬಯಸುವ ಗುಂಪಿಗೆ ಸೇರುತ್ತಾರೆ, ಕೂಡಣದ ಒಳಿತು ಮತ್ತು ಬಾಳಬಗೆಯ ಏಳಿಗೆಗೆ ಬಗೆಬಗೆಯ ಸೊಮ್ಮುಗಳನ್ನು ಬಳಸುತ್ತಾರೆ. ಕೂಡಣದ ಹೊಸಜಂಬಾರಿಕೆಯು ತಿಳಿದಿರದ ಹೊಳಹೇನಲ್ಲ, ಅದರೂ ಇತ್ತೀಚಿನ ವರುಶಗಳಲ್ಲಿ ಕೂಡಣ ಮತ್ತು ಕಲಿಕೆಯ ಅರಕೆ(social and academic research)ಗಳಲ್ಲಿ ಇದು ಹೆಚ್ಚು ಪರಿಚಿತವಾಗಿದೆ. ಕೂಡಣದ ಬೆಳವಣಿಗೆ ಮತ್ತು ಒಳ್ಳೆಯ ಗುರಿಹೊಂದಿರುವ ಹಲವು ಚಟುವಟಿಕೆಗಳು ಇತ್ತೀಚಿನ ಹಲವು ಹುರುಳುಗಳಿಗೆ ಇಂಬುಕೊಡುತ್ತವೆ. ಇತ್ತೀಚಿಗೆ ಹಲವು ಮುಕಗಳಿಂದ ಬಳಕೆಗೆ ಬರುವ ಕೂಡಣದ ಹೊಸಜಂಬಾರಿಕೆಗೆ ನೇರ ಹುರುಳನ್ನು ತಿಳಿಸುವುದು ಬಲು ತೊಡಕಿನ ಎಣಿಕೆಯಾಗಿ ನಿಲ್ಲುತ್ತದೆ.

ಕೂಡಣದ ಹೊಸಜಂಬಾರಿಕೆಯ ಹಳಮೆ ಮತ್ತು ಬೆಳೆದು ಬಂದ ಬಗೆ
ಕೂಡಣದ ಹೊಸಜಂಬಾರಿಕೆ ಮತ್ತು ಕೂಡಣದ ಹೊಸಜಂಬಾರಿಗ(social entrepreneur) ಪದಗಳನ್ನು ಮೊದಲಿಗೆ ಸುಮಾರು 1970ರಲ್ಲಿ ಕೂಡಣದ ಬದಲಾವಣೆಗಳ ಕುರಿತಾದ ಬರಹಗಳಲ್ಲಿ ಬಳಸಲಾಗಿದೆ. ಇದರ ಬೆಳವಣಿಗೆಯಲ್ಲಿ ಹಲವು ಮೈಲುಗಲ್ಲುಗಳಿವೆ. ಯು.ಕೆ.ಯ ಪ್ರದಾನ ಮಂತ್ರಿಯವರ ಸಲಹೆಗಾರರಾಗಿದ್ದ, ಬರಹಗಾರ ಚಾರ‍್ಲ್ಸ್ ಲೀಡ್ಬೀಟರ್ ‘ದಿ ರೈಸ್ ಆಪ್ ದಿ ಸೋಶಿಯಲ್ ಆಂತ್ರಪ್ರನರ‍್(The Raise of the Social Entrepreneur)’ ಎಂಬ ಹೊತ್ತಗೆಯನ್ನು ಬರೆದು ಕೂಡಣದ ಹೊಸಜಂಬಾರಿಕೆಯ ಬಗ್ಗೆ ತಿಳಿಸಿರುವುದು ಒಂದು ಮೈಲುಗಲ್ಲಾದರೆ, 1980ರ ಹತ್ತೇಡಿನಲ್ಲಿ ಬಿಲ್ ಡ್ರೇಟನ್(Bill Drayton) ಹೆಸರಿನ ಅಮೆರಿಕೆಯ ಕೂಡಣದ ಹೊಸಜಂಬಾರಿಗರು ‘ಅಶೋಕಾ: ಇನ್ನೊವೇಟರ‍್ಸ್ ಪಾರ್ ದಿ ಪಬ್ಲಿಕ್’ ಎಂಬ ಆದಾಯ ಬೇಡಮೆಯ ಕೂಟ(non-profit organization)ವನ್ನು ಕಟ್ಟಿದ್ದು ಈ ವಲಯದ ಇನ್ನೊಂದು ಮೈಲಿಗಲ್ಲು. ಇವರು ಕಟ್ಟಿದ ಕೂಟವು ಎಲ್ಲ ಕೂಡಣದ ಹೊಸಜಂಬಾರಿಗರನ್ನು ಹುಡುಕಿ, ಆರಯ್ಸುವ ಮತ್ತು ಬೆಳೆಸುವ ಗುರಿಯನ್ನು ಹೊಂದಿದೆ.

ಇಪ್ಪತ್ತನೆಯ ನೋರೇಡಿನ ನಡುವಿನಿಂದ ಸುಮಾರು 1990 ರವರೆಗೆ ಕೂಡಣದ ಹೊಸಜಂಬಾರಿಕೆ ಪದದ ಬಳಕೆಯಲ್ಲಿ ಮೈಕಲ್ ಯಂಗ್ ಎಂಬ ಬ್ರಿಟಿಶ್ ಕೂಡಣದರಿಗ ಮುಂಚೂಣಿಯಲ್ಲಿದ್ದರು. ಇವರು ‘ಸ್ಕೂಲ್ ಪಾರ್ ಸೋಶಿಯಲ್ ಆಂತ್ರಪ್ರನರ‍್ಶಿಪ್(School For Entrepreneurship)’ ಎಂಬ ಕಲಿಕೆವೀಡನ್ನು ತೆರೆದಿದ್ದಾರೆ. ಬಾಂಗ್ಲದೇಶದ ಮಹಮ್ಮದ್ ಯುನುಸ್ ಅವರು 1976 ರಲ್ಲಿ ಗ್ರಾಮೀಣ ಬ್ಯಾಂಕನ್ನು ಕಟ್ಟಿದ್ದರು. ಸಣ್ಣ ಪ್ರಮಾಣದ ಹಣಕಾಸಿನ ಚಳುವಳಿಯನ್ನು ಈ ಹಣಮನೆ ನಡೆಸಿತು, ಹೀಗಾಗಿ ಮಹಮ್ಮದ್ ಯುನುಸ್ ಅವರಿಗೆ ಪಾದರ್ ಆಪ್ ಮೈಕ್ರೋಕ್ರೆಡಿಟ್ಸ್ ಎಂದು ಗುರುತಿಸಲಾಗುತ್ತದೆ. ಇವರಿಗೆ 2006 ನೇ ಸಾಲಿನ ನೊಬೆಲ್ ಬಹುಮಾನ ಸಿಕ್ಕಿದೆ.

ಇತ್ತೀಚಿನ ನಾಡುಗಳಲ್ಲಿ ಕೂಡಣದ ಹೊಸಜಂಬಾರಿಕೆಯ ವಾಡಿಕೆ
ಕೂಡಣದ ಹೊಸಜಂಬಾರಿಕೆಗಳಿಗೆ ಮಂದಿಯ ತೊಡಕುಗಳನ್ನು ತೊಡೆದುಹಾಕಲು ಹೊಸ ಹಮ್ಮುಗೆಗಳು ಸರಳ ಹಾಗೂ ಮುಕ್ಯ ಕೀಲಿಕೈಯಾಗಿವೆ. ಇತ್ತೀಚಿನ ನಾಡುಗಳಲ್ಲಿ ಕೂಡಣದ ಹೊಸಜಂಬಾರಿಕೆಯು ಹಲವು ರೀತಿಯಲ್ಲಿ ವಾಡಿಕೆಯಲ್ಲಿದೆ. ಕೂಡಣದ ಹೊಸಜಂಬಾರಿಕೆಗಳು ಬಗೆಬಗೆಯ ಹಂಪಡೆದ ಗುಂಪುಗಳ(beneficiary group) ಏಳ್ಗೆ ಮತ್ತು ಬೇಕುಗಳಿಗೆ ತಕ್ಕಂತೆ ತಮ್ಮದೇ ಆದ ಮಾದರಿಯಲ್ಲಿ ನಡೆಯುತ್ತವೆ. ಕೂಡಣದ ಹೊಸಜಂಬಾರಿಕೆಗಳ ಹಣಕಾಸಿನೇರ‍್ಪಾಡಿನ ಮತ್ತು ಹಂಪಡೆದ ಗುಂಪುಗಳ ಬೇಕುಗಳನ್ನು ಆದಾರವಾಗಿಟ್ಟು ಮೂರು ಬಗೆಗಳಲ್ಲಿ ಬೇರ‍್ಪಡಿಸಬಹುದು.
1. ಆದಾಯ ಬೇಡಮೆಯ ಕೂಟ(non-profit organization)ಗಳು ಸ್ತಳೀಯ ಸೊಮ್ಮುಗಳನ್ನು ಬಳಸಿ ಕೂಟದ ಬೇಡಿಕೆಗಳಿಗೆ ನೆರವಾಗಲು ಕೆಲಸಮಾಡುತ್ತವೆ. ಈ ರೀತಿಯ ಕೂಟಗಳು ದಾನಿಗಳ ನೆರವಿನಿಂದ ನಡೆಯುತ್ತವೆ.
2. ಅರೆ ಆದಾಯ ಬೆಂಬಲಿತ(semi profit dependent) ಗುಂಪುಗಳು ತಮ್ಮ ಉಳಿವಿಗಾಗಿ ಸಣ್ಣ ಆದಾಯವನ್ನು ಮೂಲವಾಗಿಸಿದರೆ ಇತರ ವೆಚ್ಚಕ್ಕೆ ಸರಕಾರ ಮತ್ತು ಬಂಡವಾಳವನ್ನು ಅವಲಂಬಿಸಿವೆ.
3. ಆದಾಯಕ್ಕಾಗಿ ಇರುವ (for profit) ಕೂಟಗಳು ಸಾಮಾನ್ಯವಾಗಿ ತಮ್ಮ ಗಳಿಕೆಯನ್ನು ಕೂಡಣದ ಒಳಿತಿಗಾಗಿ ಬಳಸುತ್ತವೆ. ಮತ್ತು ಇತರ ಹೊಸಜಂಬಾರಿಗರ ಆರಯ್ಕೆ ಮತ್ತು ಬೆಳವಣಿಗೆಗೆ ಒತ್ತು ನೀಡುತ್ತವೆ.

(ಮಾಹಿತಿ ಸೆಲೆ: Ashoka.orgವಿಕಿಪೀಡಿಯ)

(ಚಿತ್ರಸೆಲೆ: venturesden.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 02/12/2015

    […] ಹಿಂದಿನ ಓದಿನಲ್ಲಿ ಕೂಡಣದ ಹೊಸಜಂಬಾರಿಕೆ(social entrepreneurship)ಯ ಹಳಮೆ, ಬೆಳೆದು ಬಂದ ಬಗೆ ಮತ್ತು ಇತ್ತೀಚಿನ ದಿನಗಳಲ್ಲಿ ಅದರ ವಾಡಿಕೆಯ ಕುರಿತು ತಿಳಿದಿರುವೆವು. ಯಾವುದೇ ಒಂದು ಕೆಲಸ ಮಾಡಬೇಕಾದರೆ ನಾವು ಅದನ್ನು ಏಕೆ ಮಾಡಬೇಕು? ಅದರಿಂದಾಗುವ ಲಾಬ ನಶ್ಟಗಳು ಏನು? ಎಂಬ ಲೆಕ್ಕಾಚಾರವನ್ನು ನಾವು ಮಾಡುತ್ತೇವೆ. ಇದು ಕೂಡಣದ ಹೊಸಜಂಬಾರಿಕೆ ವಿಶಯದಲ್ಲಿ ಹೊರತೇನಲ್ಲ. ಕೂಡಣದ ಹೊಸಜಂಬಾರಿಕೆಯು ಇಂದಿನ ಇಡಿನೆಲಗೊಳಿಸುವಿಕೆ(globalization)ಯ ದಿನಗಳಲ್ಲಿ ಇಡಿನೆಲದ ತೊಡಕು(global challenges)ಗಳನ್ನು ಹೇಗೆ ಮೆಟ್ಟಿನಿಲ್ಲಬಲ್ಲುದು? ಎಂಬ ಪ್ರಶ್ನೆ ಎದುರಾಗುತ್ತದೆ. ಹಾಗೆಯೇ ಅದಕ್ಕೆ ತಕ್ಕ ಉತ್ತರವೂ ಇದೆ. […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *