ಸಿಹಿ ಸಿಹಿಯಾದ ಕ್ಯಾರೆಟ್ ಪಾಯಸ

ಪ್ರತಿಬಾ ಶ್ರೀನಿವಾಸ್.

carrot-kheer-recipe

ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್ – 1/4 ಕೆ.ಜಿ
ಹಾಲು – 1/2 ಲೀಟರ್
ತುಪ್ಪ – 100 ಗ್ರಾಂ
ಸಕ್ಕರೆ – 100 ಗ್ರಾಂ
ದ್ರಾಕ್ಶಿ, ಗೋಡಂಬಿ, ಪಿಸ್ತಾ, ಬಾದಾಮಿ- 1 ಲೋಟ

ಮಾಡುವ ವಿದಾನ:
ಕ್ಯಾರೆಟನ್ನು ಚೆನ್ನಾಗಿ ತೊಳೆದು ತುರಿದುಕೊಳ್ಳಬೇಕು. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಗೋಡಂಬಿ, ಬಾದಾಮಿ, ತುರಿದ ಕ್ಯಾರೆಟ್ ಮತ್ತು ಸ್ವಲ್ಪ ಹಾಲು ಹಾಕಿ ಬೇಯಿಸಿಕೊಳ್ಳಬೇಕು. ಬೇಯಿಸಿದ ಕ್ಯಾರೆಟನ್ನು ರುಬ್ಬಿಕೊಳ್ಳಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಅದು ಬಿಸಿಯಾದ ಬಳಿಕ ಅದಕ್ಕೆ ರುಬ್ಬಿದ ಕ್ಯಾರೆಟ್, ಹಾಲು ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ದ್ರಾಕ್ಶಿ, ಗೋಂಡಂಬಿ, ಬಾದಮಿ, ಪಿಸ್ತಾವನ್ನು ತುಪ್ಪದಲ್ಲಿ ಹುರಿದು ಕುದಿಸಿದ ಪಾಯಸಕ್ಕೆ ಹಾಕಿದರೆ ಕ್ಯಾರೆಟ್ ಪಾಯಸ ಸವಿಯಲು ಸಿದ್ದ.

(ಚಿತ್ರಸೆಲೆ: foodviva.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: