ಆಲೂಗಡ್ಡೆ ಪರೋಟ ಹಾಗು ಈರುಳ್ಳಿ ಚಟ್ನಿಯನ್ನು ಮಾಡುವ ಬಗೆ

 

ಕಲ್ಪನಾ ಹೆಗಡೆ.

20160206_094324

ಬೇಕಾಗುವ ಪದಾರ‍್ತಗಳು:

1. ಆಲೂಗಡ್ಡೆ 8
2. ಗೋದಿಹಿಟ್ಟು 1/2 ಕೆ.ಜಿ
3. ಎಣ್ಣೆ, ಸಾಸಿವೆ
4. ಕರಿಬೇವು, ಕೊತ್ತುಂಬರಿ ಸೊಪ್ಪು
5. ಅರ‍್ದ ಚಮಚ ಹಳದಿ ಪುಡಿ
6. ಹಸಿಮೆಣಸಿನಕಾಯಿ

ಮಾಡುವ ಬಗೆ:
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಬೇಯಿಸಿಕೊಳ್ಳಿ. ಆನಂತರ ಬೇಯಿಸಿದ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಿ. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತುಂಬರಿ ಸೊಪ್ಪು, ಹಳದಿ ಪುಡಿ ಹಾಕಿ ಅದಕ್ಕೆ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಕಿವುಚಿ ಚೆನ್ನಾಗಿ ಕಲಸಿ. ಆನಂತರ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ (ಉಂಡೆಯಲ್ಲಿ ಗಂಟು ಇರಬಾರದು).

ಒಂದು ಬಾಣಲೆಗೆ ನೀರು, ಉಪ್ಪು ಹಾಕಿ ಗೋದಿಹಿಟ್ಟನ್ನು ಕಲಸಿಕೊಳ್ಳಿ. ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಣಿಗೆಯಿಂದ ಸ್ವಲ್ಪ ಲಟ್ಟಿಸಿಕೊಳ್ಳಿ. ಆನಂತರ ನೀವು ತಯಾರಿಸಿದ ಆಲೂಗಡ್ಡೆಯ ಉಂಡೆಯನ್ನು ತುಂಬಿ ಸುತ್ತಲೂ ಮುಚ್ಚಿಗೆ ಮಾಡಿ, ತುಂಬಿದ ಮೇಲ್ಬಾಗವನ್ನು ತಳಕ್ಕೆ ಬರುವಂತೆ ತಿರುಗಿಸಿಕೊಂಡು ಸ್ವಲ್ಪ ಗೋದಿಹಿಟ್ಟನ್ನು ಹಾಕಿ ಲಟ್ಟಿಸಿಕೊಳ್ಳಿ. ಬಳಿಕ ಚೆನ್ನಾಗಿ ಕಾದ ಕಾವಲಿ ಮೇಲೆ ಹಾಕಿ ಬೇಯಿಸಿ. ಸ್ವಲ್ಪ ಬೆಂದ ನಂತರ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿ. ಅಶ್ಟೆ ಆಲೂಗೆಡ್ಡೆ ಪರೋಟ ಸಿದ್ದ.

ಈರುಳ್ಳಿ ಚಟ್ನಿ ಮಾಡುವ ಬಗೆ: ಬಾಣಲೆಗೆ ಎಣ್ಣೆ ಹಾಕಿ 2 ಹಸಿಮೆಣಸಿನಕಾಯಿ ಇಂಗು, ಕರಿಬೇವು, ಈರುಳ್ಳಿ ಹಾಕಿ ಹುರಿದುಕೊಳ್ಳಿ. ಆನಂತರ ಅದಕ್ಕೆ ಚಿಟಿಕೆ ಹುಣಸೆಹಣ್ಣು, ಉಪ್ಪು, ತೆಂಗಿನಕಾಯಿ ಹಾಕಿ ರುಬ್ಬಿಕೊಳ್ಳಿ. ಆಮೇಲೆ ಎಣ್ಣೆ, ಸಾಸಿವೆ ಕಾಳು ಹಾಕಿ ಒಗ್ಗರಣೆ ಹಾಕಿ.

ತಯಾರಿಸಿದ ಪರೋಟಕ್ಕೆ ಈರುಳ್ಳಿ ಚಟ್ನಿ ಹಾಗೂ ಮೊಸರಿಗೆ ಸ್ವಲ್ಪ ಚಟ್ನಿಪುಡಿ ಹಾಕಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: