ಹೂಕೋಸು ಪರೋಟಾ ಹಾಗು ಟೊಮೇಟೊ ಚಟ್ನಿ ಮಾಡುವ ಬಗೆ

 

ಕಲ್ಪನಾ ಹೆಗಡೆ.

20160216_092610

ಬೇಕಾಗುವ ಪದಾರ‍್ತಗಳು:

1. ಹೂಕೋಸು
2. ಗೋದಿಹಿಟ್ಟು 1/2 ಕೆ.ಜಿ
3. ಎಣ್ಣೆ, ಸಾಸಿವೆ
4. ಅರ‍್ದ ಚಮಚ ಓಂಕಾಳು
6. ಹಸಿಮೆಣಸಿನಕಾಯಿ 2 ರಿಂದ 4

ಮಾಡುವ ಬಗೆ:

ಮೊದಲು ಹೂಕೋಸನ್ನು ಕತ್ತರಿಸಿ ಸ್ವಲ್ಪ ಬೆಚ್ಚಗಿನ ನೀರಿಗೆ ಉಪ್ಪು ಹಾಕಿ 10 ನಿಮಿಶಗಳ ಕಾಲ ನೆನೆಸಿ ಬಳಿಕ ಅದನ್ನು ಬೇಯಿಸಿಕೊಳ್ಳಿ. ಬೇಯಿಸಿಕೊಂಡ ಮೇಲೆ ಅದಕ್ಕೆ ಓಂ ಕಾಳು, ಹಸಿಮೆಣಸಿನಕಾಯಿ ಹಾಕಿ ಮಿಕ್ಸಿಯಲ್ಲಿ ಸ್ವಲ್ಪ ರುಬ್ಬಿಕೊಳ್ಳಿ. ಆನಂತರ ಅದಕ್ಕೆ ಉಪ್ಪು ಹಾಗೂ ಹಿಡಿಯುವಶ್ಟು ಗೋದಿ ಹಿಟ್ಟನ್ನು ಹಾಕಿ ಕಲಸಿಕೊಳ್ಳಿ. ಆನಂತರ ಉಂಡೆಗಳನ್ನಾಗಿ ಮಾಡಿಕೊಂಡು ಲಟ್ಟಣಗೆಯಿಂದ ಲಟ್ಟಿಸಿಕೊಳ್ಳಿ. ಚೆನ್ನಾಗಿ ಕಾದ ಕಾವಲಿ ಮೇಲೆ ಹಾಕಿ ಬೇಯಿಸಿ. ಸ್ವಲ್ಪ ಬೆಂದ ನಂತರ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿ. ತಯಾರಿಸಿದ ಹೂಕೋಸಿನ ಪರೋಟವನ್ನು ಟೊಮೇಟೊ ಚಟ್ನಿಯೊಂದಿಗೆ ಸವಿಯಲು ನೀಡಿ.

ಟೊಮೇಟೊ ಚಟ್ನಿ ಮಾಡುವ ಬಗೆ:

ಬಾಣಲೆಗೆ ಎಣ್ಣೆ ಹಾಕಿ 2 ರಿಂದ 4 ಹಸಿಮೆಣಸಿನಕಾಯಿ, 1 ಅರ‍್ದ ಚಮಚ ಉದ್ದಿನ ಬೇಳೆ, ಅರ‍್ದ ಚಮಚ ಕಡ್ಲೆಬೇಳೆ, ಅರ‍್ದ ಚಮಚ ಹುರಿಗಡ್ಲೆ, ಇಂಗು ಹಾಕಿ ಹುರಿದು ಮಿಕ್ಸಿಗೆ ಹಾಕಿಕೊಳ್ಳಿ. ಆಮೇಲೆ ಈರುಳ್ಳಿ ಹಾಗೂ ಟೊಮೇಟೊವನ್ನು ಹುರಿದುಕೊಂಡು ರುಚಿಗೆ ತಕ್ಕಶ್ಟು ಉಪ್ಪು, ತೆಂಗಿನಕಾಯಿ ಹಾಕಿ ರುಬ್ಬಿಕೊಳ್ಳಿ. ಕೊನೆಯಲ್ಲಿ ಎಣ್ಣೆ, ಸಾಸಿವೆ ಕಾಳು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ತಯಾರಿಸಿದ ಪರೋಟಕ್ಕೆ ಟೊಮೇಟೊ ಚಟ್ನಿ ಹಾಕಿ ತಿನ್ನಲು ನೀಡಿ. ಟೊಮೇಟೊ ಚಟ್ನಿ ಚಪಾತಿಯೊಂದಿಗೆ ಹಾಗೂ ಅನ್ನದೊಂದಿಗೂ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: