ವಿದ್ಯಾರ‍್ತಿನ ಕಲಿಕೆ ನುಂಗಿತ್ತ!
ವಿದ್ಯಾರ‍್ತಿನ ವಿಶಯ ನುಂಗಿತ್ತ
ನೋಡವ್ವ ತಂಗಿ
ವಿದ್ಯಾರ‍್ತಿನ ಕಲಿಕೆ ನುಂಗಿತ್ತ
ಅಕ್ಶರಗಳು ಪದಗಳ ನುಂಗಿ
ಪದಗಳನೆಲ್ಲ ವಾಕ್ಯ ನುಂಗಿ
ನುಡಿಯನು ಅರಿತ ಜಾಣರನೆಲ್ಲ
ಕನ್ನಡ ನುಂಗಿತ್ತ ತಂಗಿ
ಅಂಕಿಗಳನು ಸಂಕ್ಯೆ ನುಂಗಿ
ಸಂಕ್ಯೆಗಳನು ಮಗ್ಗಿ ನುಂಗಿ
ಬಿಡಿಸಲು ಕುಳಿತ ಜಾಣರನೆಲ್ಲ
ಗಣಿತ ನುಂಗಿತ್ತ
ಅಂಕು ಡೊಂಕು ರೇಕೆ ನುಂಗಿ
ಸರಳ ರೇಕೆ ಬಳುಕು ನುಂಗಿ
ಚಿತ್ರಿಸ ಹೊರಟ ಜಾಣರನೆಲ್ಲ
ಕಲೆಯೇ ನುಂಗಿತ್ತ ತಂಗಿ
ಕೆರೆ ನದಿಗಳನು ಗೆರೆಗಳು ನುಂಗಿ
ಗೆರೆಗಳನೆಲ್ಲ ನಕ್ಶೆ ನುಂಗಿ
ಓದಲು ಕುಳಿತ ಜಾಣರನೆಲ್ಲ
ಬೂಗೋಳ ನುಂಗಿತ್ತ ತಂಗಿ
ಚಂದಿರನನ್ನು ಸೂರ‍್ಯ ನುಂಗಿ
ಸೂರ‍್ಯನನ್ನು ಬೂಮಿ ನುಂಗಿ
ಗ್ರಹಣ ತಿಳಿಯೋ ಜಾಣರನೆಲ್ಲ
ವಿಜ್ನಾನ ನುಂಗಿತ್ತ ತಂಗಿ
ವಿದ್ಯಾರ‍್ತಿನ ವಿಶಯ ನುಂಗಿತ್ತ
(ಚಿತ್ರ ಸೆಲೆ: ahalife.com )
ಇತ್ತೀಚಿನ ಅನಿಸಿಕೆಗಳು