ಕಲಾಂ ಮೇಶ್ಟ್ರು

– ವಾತ್ಸಲ್ಯ.


ಅಂತರಂಗದ ಮ್ರುದಂಗವೊಂದು ಮೀಟಿದೆ
ಬಾವಾಂತರಂಗ ಮಿಡಿಯುತ್ತಿದೆ
ಕನಸಿನ ಪುಟ ತೆರೆದಿದೆ

ಬಾನಂಗಳದಲಿ ಹಾರುತ್ತಿದೆ
ಅಗ್ನಿಯ ರೆಕ್ಕೆ
ಮನದಾಳದ ಮಾತೊಂದು
ಎಚ್ಚರಿಸಿದೆ

ಕನಸು ಕಾಣಿರಿ..ಕನಸು ಕಾಣಿರಿ
ದ್ವನಿಯೊಂದು ಮೊಳಗಿದೆ
ಆ ಸಾದನೆಯ ಹಿಂದಿದೆ

ಅದೇ ದೈರ‍್ಯ ಅದೇ ಸ್ತೈರ‍್ಯ ಅದೇ ಆದರ‍್ಶ
ಬದುಕಿನ ಬಿರುಗಾಳಿಯನು
ಸೆಟೆದು
ನೀ ಏರಿದೆ ಎತ್ತರ
ವಿಶ್ವದೆತ್ತರ

ನೀ ತೋರಿದೆ ಮಾನವತೆಯ ಪಾಟ
ಯುವಜನತೆಗೆ
ದಾರಿದೀಪವಾದೆ
ಓ ವಿಶ್ವಮಾನವ…

(ಚಿತ್ರ ಸೆಲೆ: britannica.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.