ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ.

Lord-Ganesha-HD-Wallpaper

ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ
ಬಂದ ನೋಡಿರೊ

ಒಂಟಿ ಕೋರೆ ಆನೆ ಮೊಗದ
ಚಂದ ನೋಡಿರೊ

ಹರಿದ ಹೊಟ್ಟೆಗಾವು ಬಿಗಿದ
ಗಂಟು ನೋಡಿರೊ

ಇಲಿಯ ಹತ್ತಿ ಸಾಗುತಿರುವ
ಕುಂಟು ನೋಡಿರೊ

ಗೌರಿ ಮೈಯ ಬೆವರ ಮಗನ
ಸಿರಿಯ ನೋಡಿರೊ

ದುಡಿದು ತಿಂಬ ರೈತ ಜನರ
ಸ್ವರವ ಕೇಳಿರೊ

ಬಿತ್ತಿ ಬೆಳೆದ ಮೊದಲ ಜೀವಿ
ಚಲುವ ತಿಳಿಯಿರೊ

ಸಕಲ ವಿದ್ಯೆಗಾದಿ ಪುರುಶ
ಒಲವ ಗಳಿಸಿರೊ

ಮಣ್ಣ ಗುಣಕೆ ಬಣ್ಣ ಬಳೆದು
ಕಾಡಬೇಡಿರೊ

ಕರಕಿ ಪತ್ರಿ ಕಡುಬು ಪ್ರಿಯನ
ಜಾಡನರಿಯಿರೊ

ಗಣಕ ಮೀರೊ ವೇಗದೊಡೆಯ
ಗಣಪ ನೋಡಿರೊ

ಬೆಡಗ ರೂಪ ತೊಟ್ಟುಕೊಂಡ
ಟೊಣಪ ಕಾಣಿರೊ

(ಚಿತ್ರ ಸೆಲೆ:  shortday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: