ನೀ ದೂರವಾದ ಮೇಲೆ

– ನಾಗರಾಜ್ ಬದ್ರಾ.

Screenshot_4-2

ಅರಳುವ ಮುನ್ನವೇ ಕಮರಿಹೋದ ಕನಸು
ಅದನ್ನು ನೆನೆದು ಕಣ್ಣೀರಿನ ಮಳೆಯು ಸುರಿಯುತ್ತಿರಲು
ವಿರಹ ವೇದನೆಯಲ್ಲಿ ನೆನೆದು ಹೋಗಿದೆ ಮನವು

ಒಡತಿಯನ್ನ ಕಳೆದುಕೊಂಡ ಹ್ರುದಯವು
ಬೆಟ್ಟದ ತುತ್ತತುದಿಯಲ್ಲಿ ನಿಂತಿರಲು
ನಾಳೆಯ ಬದುಕಿನ ಪಯಣ ಹೇಗೆ ಸಾಗುವುದು

ಅನುರಾಗ ಗೀತೆ ಹಾಡುತ್ತಿದ್ದ ಮನಸ್ಸು
ಮಸಣದ ಮೌನಕ್ಕೆ ಶರಣಾಗಿರಲು
ನಾಡಿಗಳು ಹೇಗೆ ನುಡಿಯುವವು

ವಸಂತಕಾಲದಲ್ಲಿ ಮಾವಿನ ಚಿಗುರು ಮೂಡಿದರು
ಮನವು ಮಾತ್ರ ಮರಬೂಮಿ ಆಗಿರಲು
ಪ್ರೀತಿಯ ಬಳ್ಳಿಯು ಹೇಗೆ ಬೆಳೆಯುವುದು

ಲೋಕವೇ ಹೇಳಿದ ಸಾವಿಲ್ಲದ ಪ್ರೇಮವು
ಇಂದು ಹೆಣವಾಗಿ ರೂಪುಗೊಂಡಿರಲು
ಜೀವನದ ದೋಣಿಯು ಹೇಗೆ ದಡಸೇರುವುದು

ಓ ಮೋಡವೆ ನನಗೊಂದು ಸಹಾಯ ಮಾಡುವೆಯಾ
ನಾ ಬರೆದ ಒಲವಿನ ಓಲೆಯ
ನನ್ನ ಹುಡುಗಿಗೆ ಮುಟ್ಟಿಸಿ ಬರುವೆಯಾ

ಓ ಚಂದಿರನೆ ನನ್ನದೊಂದು ಕೋರಿಕೆ ಈಡೇರಿಸುವೆಯಾ
ನನ್ನ ಹುಡುಗಿಯ ಮುದ್ದಾದ ಮೊಗವ
ನಿನ್ನಲ್ಲಿ ಸೆರೆಹಿಡಿದು ತರುವೆಯಾ

ಓ ರವಿಯೆ ಇಲ್ಲೊಂದು ಜೀವವು
ಅವಳ ಪ್ರೀತಿಯ ಬಯಸಿ ಕಾಯುತ್ತಿದೆಯೆಂದು
ನನ್ನ ಹುಡುಗಿಗೆ ತಿಳಿಸುವೆಯಾ

(ಚಿತ್ರಸೆಲೆ: quoteslogy.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *