ಕವಿತೆ: ದಿಗಂತದಾಚೆ ಏನಿದೆ ?

– ನಿತಿನ್ ಗೌಡ.

ದಿಂಗತದಂಚಿನಲ್ಲಿ ಏನಿದೆ
ಪಯಣದಲ್ಲಿಲ್ಲದಂತದ್ದು !
ಪಯಣದ ನೆನಪುಗಳೇ ಸಾಕಲ್ಲವೇ
ಬಾಳ ಸಾರ ಮೆಲುಕು ಹಾಕಲು
ಬಾಳ‌ ಅನುಬಾವ ಅನುಬವಿಸಲು

ಏಳು ಬೀಳುಗಳ ಕಂತೆ,
ಅದುವೆ ಬಾಳ ಸಂತೆ!
ಆದರೂ ಅದರಲ್ಲಿ, ಅದೇನೋ
ಕಹಿಯಂತೆ, ಸಿಹಿಯಂತೆ, ಸಾರ‌್ತಕತೆಯಿದೆಯಂತೆ

ಅದೇನೋ ಹುಡುಕಾಟ,
ಅದೇನೋ ಅಲೆದಾಟ, ಅದೇನೋ ಚಡಪಡಿಕೆ
ಕಾಣದ ದೀವಿಗೆಯೆಡೆಗೆ..
ದಿಟದೀವಿಗೆ ನಿನ್ನೊಳು ಬೆಳಗೆ,
ಅದುವೆ ಕಾಣು, ನೀ ಬಗವಂತನಾಗುವ ಗಳಿಗೆ

ಹಸಿದವನಿಗೆ ಅನ್ನವಾಗು
ಅಲೆಮಾರಿಗೆ ಸೂರಾಗು
ಅರಿವು ಬಯಸಿದವರಿಗೆ, ಅರಿವಾಗು
ಕೊನೆಗೆ ನೀ ತ್ರಿವಿದ ದಾಸೋಹಿಯಾಗು,
ನೀ ಮೊದಲು ಮಾನವನಾಗು,
ಕಡೆಗೆ ಬಳಲಿದವರ ಪಾಲಿನ ಬಗವಂತನಾಗು

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks