ನೆಮ್ಮದಿ

– ಸುರಬಿ ಲತಾ.

baravase

ಮಲಗು ದೊರೆ ಸುಕವಾಗಿ
ಮರೆತು ಎಲ್ಲ ನೋವು, ಹಾಯಾಗಿ

ದೇವರು ಕೊಟ್ಟ ನೆರಳಲ್ಲಿ
ನೀ ಮಗುವಂತೆ ಮಡಿಲಲ್ಲಿ

ಪರಿಸ್ತಿತಿ ಬದಲಾದರೇನು
ಬಡತನ ಬಳಿ ಬಂದರೇನು

ದೇವನಲ್ಲಿ ಕತ್ತಲಿರದು
ಒಳ್ಳೆಯ ಕಾಲ ಬರದೇ ಇರದು

ಕಾಲಕ್ಕೆ ಬದಲಾದಂತೆ ಮನುಜರು
ಬದಲಾಗನು ಎಂದೂ ದೇವರು

ನ್ಯಾಯ ನೀತಿಯೇ ಅವನು
ಅವನ ನಂಬಲು ಕೈ ಬಿಡನು

ನಿನ್ನ ನೆರಳಾಗಿ ಇರುವೆ ನಾನು
ನನ್ನ ಬಾಳಿನ ದೈವ ನೀನು

ಬಾಳುವ ಎಂದೂ ಒಂದಾಗಿ
ಕಶ್ಟ ಸುಕದಲ್ಲಿ ಜೊತೆಯಾಗಿ

( ಚಿತ್ರ ಸೆಲೆ: chobirdokan.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: