ಪ್ರೀತಿ ಅಮರ

– ಸುರಬಿ ಲತಾ.

 

ಕಲ್ಲಿನಲ್ಲಿ ಮರಳಲ್ಲಿ ಬರೆದೆವು
ಇಬ್ಬರ ಹೆಸರನ್ನು ಒಮ್ಮೆ
ಕಣ್ಣು ಮುಚ್ಚಿ ನೀ ನೆನೆ ಅದನ್ನು

ಕಾಯಾದ ಮಾವು ಹಣ್ಣಾಯಿತು
ನಮ್ಮ ಸ್ನೇಹವು ಒಲವಾಯುತು
ಮಾತೆಲ್ಲವೂ ಮೌನವಾಯಿತು

ಸಲಿಗೆಯು ಮರೆಯಾಯಿತು
ನಾಚಿಕೆ ಒಡಲ ತಬ್ಬಿತು
ಹೊಸ ಆಸೆ ಕಣ್ಣ ತುಂಬಿತು

ಹೊಸ ಬಾಳಿಗೆ ನಾಂದಿಯಾಯಿತು
ಪ್ರೀತಿಯಲ್ಲಿ ಮಿಂದೇಳುವ ಮನಸಾಯಿತು
ಉಸಿರಲ್ಲಿ ಉಸಿರಾಗಿ ನಿಲ್ಲುವಂತಾಯಿತು

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: