ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು

 ಶ್ರೀನಿವಾಸಮೂರ‍್ತಿ ಬಿ.ಜಿ.

prayer

ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು
ನಿನ್ನಂತೆಯೇ ನಾನಾಗಲು ಯತ್ನಿಸಿ, ಲೋಕವಾಗುವೆ ದೇವಾ

ಇದ್ದಾಗ ಎಲ್ಲವು ನನ್ನದೇ ಎಂಬ ಸೋಗಿನೊಳಗೆ ಬೆಂದು ಸೋತಿಹೆನು
ನೆಮ್ಮದಿಯ ಬಾಳಿಗೆ ಈ ಸೋಗು-ಸೋಪಾನ ಬೇಕಾಗಿಲ್ಲ ದೇವಾ
ನೊಂದವರ ನೋಂದಣಿಗೆ ನೀನು ಕರೆಯೋಲೆ ನೀಡಿದರೆ
ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು
ಬರವಸೆಯ ಓಂಕಾರವ ಪಸರಿಸಲು
ಈಗಲೇ ನನ್ನ ಅಹಂಕಾರವ ಅಳಿಸುವೆ ದೇವಾ

ದಯೆಗೆ ಸಾವಿಲ್ಲ, ಸಾವಿಗೆ ಬೇದವಿಲ್ಲ ಇದು ನೀ ಹೆಣೆದ ಜಾಲ
ನೀ ಬಿತ್ತರಿಸುವ ದಯೆಯ ಬೆಳಕಿಗೆ ಕರೆಯೋಲೆ ನೀಡು ದೇವಾ
ಕರೆಗೆ ಓಗೊಟ್ಟು, ನಿನ್ನ ಶರತ್ತಿಗೆ ಒಳಪಟ್ಟು
ವಿಶ್ವಾಸವ ಬೆಸೆಯಲು ಮುಳ್ಳುನಗೆಯ ತೊರೆದು
ಈಗಲೇ ಮುಗುಳುನಗೆಯ ಬೀರುವೆ ದೇವಾ

( ಚಿತ್ರ ಸೆಲೆ: wikihow.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: