ಕತ್ತಲು ಬರುತಿದೆ ಬೆಳಕನೋಡಿಸುತ

ಸುಮಂತ ಉಪಾದ್ಯಾಯ.

ಮೋಡ ಕವಿಯುತಿದೆ ಮಳೆಯು ಸುರಿಯುತಿದೆ
ಎಲೆಯು ಚಿಗುರುತಿದೆ ನವಿಲು ಕುಣಿಯುತಿದೆ
ಎಲ್ಲವೂ ನೆನಪಾಗುತಿದೆ ಮನಸ್ಸು ವಿಲವಿಲನೆ ಒದ್ದಾಡುತಿದೆ

ನಡು ನೀರಲ್ಲಿ ನಿಂತಂತಿದೆ ಜೀವನ
ಎದೆಯಾಳದಲ್ಲಿ ಹೇಳಿಕೊಳ್ಳಲಾಗದ ದುಕ್ಕ ದುಮ್ಮಾನ
ಇಂತ ಬದುಕು ಕೊಟ್ಟ ದೇವರಿಗೊಂದು ನಮನ

ಕತ್ತಲು ಬರುತಿದೆ ಬೆಳಕನೋಡಿಸುತ
ನೆನಪುಗಳು ಬರುತಿವೆ ಮನವ ಹಿಂಡುತ
ಈ ಬದುಕು ಸಾಕೆನೆಸಿದೆ ಜೀವಿಸುತ

ಅಳೋಣವೆಂದರೆ ನೀರಿಲ್ಲ ಕಣ್ಣಲ್ಲಿ
ಎಲ್ಲೋ ಇದೆ ಒಂದು ಚೂರು ಮನದಲ್ಲಿ
ಈ ಜೀವನವೇ ಸಾಕೆನೆಸಿದೆ ನನ್ನಲ್ಲಿ

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: