ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.

 

ಈ ನಿಸರ‍್ಗವು ಎಶ್ಟು ಸುಂದರ
ಬೂತಾಯಿಯ ಪ್ರೇಮಮಂದಿರ

ಬಯಲೆಲ್ಲ ಹಸಿರು, ನೀಡುತಿದೆ ಉಸಿರು
ಬೀಸುತಿಹ ತಂಗಾಳಿ ಇಂಪೆಲ್ಲವು
ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ
ಸೂಸುವರು ನಲ್ಮೆಯ ಹೊಂಗಿರಣವ

ಹಕ್ಕಿಗಳ ಕೂಗು, ಕೇಳುತ್ತ ಬೀಗು
ಸಂಗೀತದ ರಸಪಾಕವು
ಕಡಿದಾದ ಕಣಿವೆಯಲಿ, ದುಮ್ಮಿಕ್ಕುವ ಜಲದಾರೆ
ಸ್ರುಶ್ಟಿಸಿದೆ ಸೌಂದರ‍್ಯವ

ಬೆಟ್ಟ ಗುಡ್ಡ ಕಾಡು, ಪ್ರಾಣಿ ಪಕ್ಶಿ ಬೀಡು
ಬೆಸೆದಿದೆ ಹೊಂದಾಣಿಕೆ ಬಂದವು
ಮೇಲು ಕೀಳು ಇಲ್ಲ, ಸಹಬಾಳ್ವೆಯೇ ಎಲ್ಲಾ
ಪ್ರಕ್ರುತಿಯ ನಿಯಮ ಚೆಂದವು

ನಿಸರ‍್ಗದ ಜೊತೆಗೆ ಬದುಕು, ಮಾನವ ಕುಲಕೆ ಬೆಳಕು
ಸ್ರುಶ್ಟಿಯಲ್ಲಿ ಎಲ್ಲಾ ಸಮವು
ಮಿತಿಯಾದ ಆಸೆ, ಮರೆತು ಹೋದರೆ ಸ್ವಾರ‍್ತ
ಬೂತಾಯಿಯ ಮಡಿಲೇ ಸ್ವರ‍್ಗವು

(ಚಿತ್ರ ಸೆಲೆ: stuartwilde.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: