ಒಲವೇ ನನ್ನ ನೆನಪಾಗದೇ ನಿನಗೆ?

ಪೂರ‍್ಣಿಮಾ ಎಮ್ ಪಿರಾಜಿ.

ನೆಪವಾಯಿತೆ ನಿನಗೆ?
ನನ್ನ ನೆನಪಾಗದೆ ನಿನಗೆ?
ನೆಪ ಹೇಳಿ ಮರೆಯಾದ ಒಲವೇ
ನನ್ನ ನೆನಪಾಗದೆ ನಿನಗೆ?

ನೆನಪುಗಳ ಮೆಲಕು ಹಾಕುತ ನನಗೆ
ತಳಮಳದ ಬಾವನೆ ಪ್ರತಿ ಗಳಿಗೆ
ಹ್ರುದಯವು ಕೊರಗಿ ಸಿಕ್ಕಂತಾಗಿದೆ ಒಲವಿನ ಸುಳಿಗೆ
ಅಳಿಸಲಾಗದ ಬಾವ ತುಂಬಿದ ಮದುರ ಕ್ಶಣಗಳ ಜೋಳಿಗೆ
ಒಲವೇ ನನ್ನ ನೆನಪಾಗದೇ ನಿನಗೆ?

ಬಿಸಿ ಉಸಿರಲ್ಲಿ ನಿನ್ನ ಹೆಸರು
ಪಿಸುಗುಡುವಂತೆ ಈ ಬೀಸೊ ಗಾಳಿಗೆ
ಹಟದಲಿ ಮನ ಬಯಸಿದೆ
ಬಯಸಿದ ಪ್ರೀತಿ ಸಿಗಲಾಗದ ನೋವು ಹೆಚ್ಚಾಗಿದೆ
ಒಲವೇ ನನ್ನ ನೆನಪಾಗದೇ ನಿನಗೆ?

ಮರೆತ ಮಾತು ಮೌನ ಮುರಿದು
ರವಾನಿಸಲಾಗದೆ ಹ್ರುದಯ – ಬಂದನ ಪ್ರೀತಿ ಬೇಡಿಗೆ
ಸಮಯ ಸರಿಯದೆ ಬೇಸರದಿ ನಿಂತಿರಲು
ಕಣ್ಣೀರು ಕಾಣದಂತೆ ಸುರಿದಿದೆ ಮಳೆ ದರೆಗೆ
ಒಲವೇ ನನ್ನ ನೆನಪಾಗದೇ ನಿನಗೆ?

(ಚಿತ್ರ ಸೆಲೆ: healingwithdrcraig.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: