ಒಂಟಿಯಾಗಿಸಿ ಬಿಟ್ಟು ನೀ ಹೋಗದಿರು

– ಸುರಬಿ ಲತಾ.

ಬಂದವನಂತೆ ಬಂದು
ಅಪ್ಪಣೆ ಕೇಳದೇ ಮನ
ಕದ್ದು ಹೋಗದಿರು

ಕಣ್ಣ ನೋಡುವ ನೆಪದಲ್ಲಿ
ಕನಸುಗಳ ರಾಶಿ
ಬಿತ್ತಿ ಹೋಗದಿರು

ಹೋದವನಂತೆ ಹೋಗಿ
ನನ್ನ ನೆರಳಾಗಿ
ನಿಲ್ಲದಿರು

ಮರೆತವನಂತೆ ನಟಿಸಿ
ಕಳ್ಳ ನೋಟವ
ಬೀರದಿರು

ಕರೆಯದಂತೆ ಮೌನವಹಿಸಿ
ಆಯಸ್ಕಾಂತದಂತೆ
ಸೆಳೆಯದಿರು

ಆಡದೇ ಆಡಿದ ಮಾತುಗಳ
ನೀ ಅರ‍್ತ
ಹುಡುಕದಿರು

ಕಳ್ಳನಂತೆ ಮಳ್ಳತನದಿ
ಒಂಟಿಯಾಗಿಸಿ
ಬಿಟ್ಟು ಹೋಗದಿರು

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: