ಮಾಡಿ ಸವಿಯಿರಿ ಜುಣಕದ ವಡೆ

– ರೂಪಾ ಪಾಟೀಲ್.

ಬೇಕಾಗುವ ಸಾಮಗ್ರಿಗಳು

ಕಡಲೆ ಹಿಟ್ಟು – 1/2 ಬಟ್ಟಲು
ನೀರು – 1 ಬಟ್ಟಲು
ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ
ನಿಂಬೆಹಣ್ಣು – 1/2
ಉಪ್ಪು – ರುಚಿಗೆ ತಕ್ಕಶ್ಟು
ಕೊತ್ತಂಬರಿ – ಸ್ವಲ್ಪ
ಈರುಳ್ಳಿ – 1
ಗಸಗಸೆ – ಸ್ವಲ್ಪ
ಅರಿಶಿಣ ಪುಡಿ
ಎಣ್ಣೆ – 2-3 ಚಮಚ
ಒಗ್ಗರಣೆಗೆ ಜೀರಿಗೆ, ಸಾಸಿವೆ, ಕರಿಬೇವು

ಮಾಡುವ ವಿದಾನ

ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದು ಸ್ವಲ್ಪ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಲಸಿಕೊಳ್ಳಿ. ಈರುಳ್ಳಿ ಸ್ವಲ್ಪ ಕೆಂಪಾದ ಮೇಲೆ ಉರಿ ಸಣ್ಣಗೆ ಮಾಡಿ, ಅರಿಶಿಣ ಪುಡಿ, ಮೆಣಸಿನಕಾಯಿ ಚಟ್ನಿ ಹಾಕಿ ಹುರಿದುಕೊಳ್ಳುವುದು. ಈ ಒಗ್ಗರಣೆಗೆ ನೀರು, ನಿಂಬೆಹಣ್ಣಿನ ರಸ, ಉಪ್ಪು ಹಾಕಿಕೊಳ್ಳಿ. ನೀರು ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಕಡಲೆಹಿಟ್ಟು ಹಾಕಿಕೊಂಡು ಗಂಟಾಗದಂತೆ ಚೆನ್ನಾಗಿ ಕೈಯಾಡಿಸುತ್ತಿರಿ. ಹೀಗೆ ತಯಾರಿಸಿಕೊಂಡಿರುವ ಜುಣಕ ಗಟ್ಟಿಯಾಗಿ ಮುದ್ದೆ ಹದಕ್ಕೆ ಬಂದ ಮೇಲೆ ಒಲೆಯಿಂದ (ಗ್ಯಾಸ್ ಸ್ಟೋವ್) ಕೆಳಗಿಳಿಸುವುದು. ಎಣ್ಣೆ ಸವರಿದ ತಟ್ಟೆಗೆ ಇದನ್ನು ಹಾಕಿಕೊಂಡು, ಅದರ ಮೇಲೆ ಗಸಗಸೆ, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸುವುದು. ನಂತರ ಕೈಯಿಂದ ಇದನ್ನು ತುಸು ಮೆಲ್ಲನೆ ತಟ್ಟಿ, 10 ನಿಮಿಶಗಳ ಬಳಿಕ ಚೌಕಾಕಾರದಲ್ಲಿ ಕೊರೆದುಕೊಂಡರೆ ಜುಣಕದ ವಡೆ ತಯಾರು.

ಜುಣಕದ ವಡೆ ಜೋಳ ಅತವಾ ಸಜ್ಜೆ ರೊಟ್ಟಿಯೊಂದಿಗೆ, ಇಲ್ಲವೇ ಚಪಾತಿಯೊಂದಿಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: