ಒಂದಾಗುವ ಬಾ…

– ಪ್ರತಿಬಾ ಶ್ರೀನಿವಾಸ್.

ನಿನ್ನ ಆಗಮನ ನನ್ನ ಬಾಳಿಗೆ
ತಿಳಿಯದೆ ಆದ ಹೊಸ ಸಂಚಲನ
ಅರಿತೋ ಅರಿಯದೆಯೋ ಈ
ಮನಸ್ಸಿಗಾಯಿತು ರೊಮಾಂಚನ|

ನಿನ್ನ ನಗುವಿನ ನೋಟಗಳು
ನನ್ನೊಲವಿಗೆ ಸಿಹಿ ಉಣಿಸಿತು
ನಿನ್ನ ಮಾತಿನ ಬಾಣಗಳು
ನನ್ನ ಜೀವಕೆ ಹುರುಪು ತುಂಬಿತು

ನಿನ್ನ ಗುಂಗಿನಲ್ಲೆ ಇರುವ ನನಗೆ
ನನ್ನೇ ನಾ ಮರೆತಂತೆ ಬಾಸವಾಗುವುದು
ಮರುಕ್ಶಣವೇ ಮನ ತಟ್ಟುವುದು
ಆ ನಿನ್ನ ಸಿಹಿಸಿಹಿ ನೆನಪುಗಳು

ಕಿರುಬೆರಳ ಹಿಡಿದು ಜೊತೆಯಾಗಿ
ಸಂಸಾರದ ಹಾದಿಯಲಿ ಸಾಗುವ
ಸಪ್ತಪದಿಯ ತುಳಿದು
ಸಪ್ತಜನ್ಮದಲು ಒಂದಾಗುವಾ…

(ಚಿತ್ರ ಸೆಲೆ: wikimedia)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.