ಹೀರೆಕಾಯಿ ಬೋಂಡಾ – ಇದರ ರುಚಿಗೆ ಸಾಟಿಯಿಲ್ಲ!
– ಕಲ್ಪನಾ ಹೆಗಡೆ.
ಬೇಕಾಗುವ ಪದಾರ‍್ತಗಳು:
1. 100 ಗ್ರಾಂ ಕಡ್ಲೆಹಿಟ್ಟು
2. 25 ಗ್ರಾಂ ಅಕ್ಕಿಹಿಟ್ಟು
3. ಕಾಲು ಚಮಚ ಓಂಕಾಳು
4. 2 ಚಮಚ ಮೆಣಸಿನಪುಡಿ
5. ಇಂಗು
6. ರುಚಿಗೆ ತಕ್ಕಶ್ಟು ಉಪ್ಪು
ಮಾಡುವ ಬಗೆ:
ಮೊದಲು ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಚಾಕುವಿನಿಂದ ದುಂಡಾಕಾರದಲ್ಲಿ ತೆಳ್ಳಗೆ ಕತ್ತರಿಸಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಓಂಕಾಳು, ಮೆಣಸಿನಪುಡಿ, ಇಂಗು, ನೀರು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಕಲಸಿಕೊಳ್ಳಿ. ಆಮೇಲೆ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಕಾಯಿಸಿಕೊಳ್ಳಿ. ಬಳಿಕ ನೀವು ಕತ್ತರಿಸಿಟ್ಟ ಹೀರೆಕಾಯಿ ತುಂಡುಗಳನ್ನು ಕಡ್ಲೆಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಿ. ಜಾಲಿ ಸೌಟಿನಿಂದ ತಿರುಗ-ಮರುಗ ಮಾಡಿ ಬೇಯಿಸಿ. ಜಾಲಿಸೌಟಿನಿಂದ ತೆಗೆದು ಎಣ್ಣೆ ಇಳಿಯುವ ತನಕ ಬಿಟ್ಟು, ಟೊಮೆಟೊ ಸಾಸ್ ಅತವಾ ಕಾಯಿ ಚಟ್ನಿಯೊಂದಿಗೆ ತಿನ್ನಲು ನೀಡಿ.
ಇತ್ತೀಚಿನ ಅನಿಸಿಕೆಗಳು