ಸಜ್ಜಕದ ಹೋಳಿಗೆ
– ಸವಿತಾ.
ಉತ್ತರ ಕರ‍್ನಾಟಕದ ಕಡೆ ಹಬ್ಬ-ಹುಣ್ಣಿಮೆ-ಅಮಾವಾಸ್ಯೆ ದಿನ ಮಾಡುವ ಸಿಹಿ ಅಡುಗೆ – ಸಜ್ಜಕದ ಹೋಳಿಗೆ.
ಕಣಕ ಮಾಡಲು ಬೇಕಾದ ಪದಾರ‍್ತಗಳು:
- 1 ಲೋಟ ಚಿರೋಟಿ ರವೆ
- 1 ಲೋಟ ಗೋದಿ ಹಿಟ್ಟು
- 1 ಲೋಟ ಮೈದಾ ಹಿಟ್ಟು
ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ತೆಳುವಾಗಿ ಹಿಟ್ಟು ಕಲಸಿ ಒಂದು ತಾಸು ನೆನೆಯಲು ಬಿಡಿ
ಹೂರಣ ಮಾಡಲು ಬೇಕಾದ ಪದಾರ‍್ತಗಳು:
- 4 ಲೋಟ ನೀರು
- 2 ಲೋಟ ಬನ್ಸಿರವೆ
- 2 ಲೋಟ ಬೆಲ್ಲ
- 4 ಏಲಕ್ಕಿ
- 2 ಚಮಚ ಗಸಗಸೆ
ಮಾಡುವ ಬಗೆ:
- ನೀರು ಕಾಯಲು ಇಟ್ಟು, ಬೆಲ್ಲ ಹಾಕಿರಿ
- ಬೆಲ್ಲ ಕರಗಿ ಒಂದು ಕುದಿ ಬಂದ ನಂತರ ಬನ್ಸಿರವೆ ಹಾಕಿ ಚೆನ್ನಾಗಿ ತಿರುಗಿಸಿ
- ಬನ್ಸಿರವೆ-ಬೆಲ್ಲದ ಮಿಶ್ರಣ ಸ್ವಲ್ಪ ಗಟ್ಟಿ ಆಗುತ್ತಿರುವಂತೆ ಗ್ಯಾಸ್ ಆರಿಸಿರಿ
- ಬಿಸಿ ತಗ್ಗಿದ ಮೇಲೆ, ಕೈಗೆ ನೀರು ಹಚ್ಚಿಕೊಂಡು ಬನ್ಸಿರವೆ-ಬೆಲ್ಲದ ಮಿಶ್ರಣಕ್ಕೆ ಏಲಕ್ಕಿ ಪುಡಿ, ಗಸಗಸೆ ಸೇರಿಸಿ, ಚೆನ್ನಾಗಿ ನಾದಿಕೊಂಡು ಹೋಳಿಗೆಗೆ ತುಂಬಲು ಹೂರಣದ ಉಂಡೆ ಮಾಡಿ ಇಟ್ಟುಕೊಳ್ಳಿ.
- ಕಣಕದ ಹಿಟ್ಟು ಸ್ವಲ್ಪ ತೆಗೆದುಕೊಂಡು ದುಂಡಾಗಿ ಚಪ್ಪಟೆ ಮಾಡಿ ಹೂರಣ ತುಂಬಿ, ಹೋಳಿಗೆ ಲಟ್ಟಿಸಿರಿ.
- ಕಾದ ತವೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೋಳಿಗೆಯ ಎರಡೂ ಬದಿ ಬೇಯಿಸಿರಿ.
ಸಜ್ಜಕದ ಹೋಳಿಗೆ ತುಪ್ಪದ ಜೊತೆ ಸವಿಯಿರಿ 🙂
ಇತ್ತೀಚಿನ ಅನಿಸಿಕೆಗಳು