ಸಾಗುತಿದೆ ಜೀವನ ಬಂಡಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಜೀವನ. ಬದುಕು, ಬಂಡಿ, ಜೀವನಜಕ್ರ, life,

ಸುಕವಾಗಿದ್ದೆ ನಾನು ತಾಯಿಯ ಗರ‍್ಬದಲ್ಲಿ
ಎಳೆದು ಹೊರ ತಂದೇ ಬಿಟ್ಟರು ವೈದ್ಯರು ಆಸ್ಪತ್ರೆಯಲ್ಲಿ
ಹೇಳದೆ-ಕೇಳದೆ ಬರುತ್ತಿತ್ತು ಸಮಯಕ್ಕೆ ಊಟ
ಏನು ಹೇಳಲಿ, ಒಳಗೆ ನಾನು ಆಡಿದ್ದೇ ಆಟ

ಹೊರಗೆ ಬಂದೊಡನೆ, ಶುರುವಾದದ್ದೇ ಮಾತು ಅಳುವಿನಲಿ
ಎಲ್ಲರೂ ಬರಮಾಡಿಕೊಂಡಿದ್ದರು ನನ್ನನ್ನು ನಗುವಿನಲಿ
ಆಕರ‍್ಶಿಸುತ್ತಿದ್ದ ವಸ್ತುಗಳು ಬಹುಪಾಲು ಇರುತ್ತಿತ್ತು ಕೈಯಲಿ
ಮುಳುಗೆ ಹೋಗಿ ಬಿಟ್ಟೆ ನಾನು ತಂದೆ-ತಾಯಿಯ ಪ್ರೀತಿಯಲಿ

ಬೆಳೆಯುತ ಹೋದಂತೆ ಶುರುವಾಯಿತು ಹೋಂವರ‍್ಕ್‌ಗಳು
ಸಣ್ಣ ಸಣ್ಣ ವಿಚಾರಗಳಿಗೂ ನಿಲ್ಲದಾಯಿತು ಗೋಳಾಟಗಳು
ಯಾರಿಗೂ ಅರ‍್ತವೇ ಆಗುತ್ತಿರಲಿಲ್ಲ ಮನಸಿನ ತೊಳಲಾಟಗಳು
ಕಾಡುತ್ತಿತ್ತು ಅವರಿವರ ಮಕ್ಕಳ ಮಾರ‍್ಕ್ಸ್ ಕಾರ‍್ಡ್‌ಗಳು

ಎಲ್ಲೂ ಬೀಳದೆ, ನಿಲ್ಲದೆ ಸಾಗಿದವು ಶಾಲಾದಿನಗಳು
ಬಲು ಸುಂದರ ನನ್ನ ಕಾಲೇಜು ದಿನಗಳು
ಮರೆಯಲು ಹೇಗೆ ಸಾದ್ಯ ನಾ ಕಳೆದ ಕ್ಶಣಗಳು
ನೆನಪಾಗದೆ ಇರದು ನನ್ನ ಕ್ರಶ್ ಆಡಿದ ಮಾತುಗಳು

ಅಲ್ಲಿಂದ ಬಂದವನೇ ದುಡಿಮೆ ಶುರು ಮಾಡಬೇಕಾಯಿತು
ಆದರೆ ಶುರುವಾಗಲು ಸ್ವಲ್ಪ ಸಮಯವೇ ಬೇಕಾಯಿತು
ಹಾಗೂ-ಹೀಗೂ ಸಂಪಾದನೆ ನಿದಾನವಾಗಿ ಆರಂಬವಾಯಿತು
ಅತಿಯಾದ ಸ್ನೇಹ, ನಂಬಿಕೆ ನನಗೆ ಶೂಲವಾಯಿತು

ಒಂಟಿತನದ ಅನುಬವ ಮೆಲ್ಲನೆ ಆಗಲು ಶುರುವಾಯಿತು
ಕಾಣದ ಪ್ರೀತಿಯ ಹುಡುಕುತಾ, ಶುದ್ದ ಸ್ನೇಹ ನಿರೀಕ್ಶೆಯಲಿ
ಸಾಗುತಿದೆ ಜೀವನ ಬಂಡಿ ಎಂದೂ ಬತ್ತದ ಉತ್ಸಾಹದಲಿ
ಕಾದಿರುವೆ ಒಳ್ಳೆ ದಿನ ಬಂದೇ ಬರುತ್ತೆ ಎಂಬ ನಂಬಿಕೆಯಲಿ

(ಚಿತ್ರ ಸೆಲೆ: geeflix.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: