ಶೇಂಗಾ ಹೋಳಿಗೆ
– ಸವಿತಾ.
ಏನೇನು ಬೇಕು?
- 2 ಲೋಟ ಶೇಂಗಾ (ಕಡಲೇ ಬೀಜ)
- 2 ಲೋಟ ಗೋದಿ ಹಿಟ್ಟು
- 2 ಚಮಚ ಮೈದಾ ಹಿಟ್ಟು
- 1 ಲೋಟ ಬೆಲ್ಲ
- 1 ಚಮಚ ಗಸಗಸೆ
- 4 ಏಲಕ್ಕಿ
ಮಾಡುವ ಬಗೆ
- ಗೋದಿ ಹಿಟ್ಟು, ಮೈದಾ ಹಿಟ್ಟು ಮತ್ತು ಎಣ್ಣೆ ಒಂದು ಚಮಚ ಕಾಯಿಸಿ ಹಾಕಿ, ನೀರು ಬೆರೆಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಗಂಟೆ ಸಮಯ ಹಾಗೇ ಇಡಿ.
- ಶೇಂಗಾ ಹುರಿದು ಬೇಳೆ ಮಾಡಿ, ಅದನ್ನು ಮಿಕ್ಸರ್ ನಲ್ಲಿ ನುಣ್ಣಗೆ ಪುಡಿ ಮಾಡಿ.
- ಒಲೆಯನ್ನು ಸಣ್ಣ ಉರಿಯಲ್ಲಿ ಇಟ್ಟು , ಬೆಲ್ಲ ಕರಗಿಸಿ, ಬಳಿಕ ಒಲೆ ಆರಿಸಿ.
- ಕರಗಿದ ಬೆಲ್ಲಕ್ಕೆ, ಶೇಂಗಾ ಪುಡಿ ಹಾಕಿ ಮತ್ತು ಏಲಕ್ಕಿಯನ್ನು ಪುಡಿ ಮಾಡಿ ಹಾಕಿ.
- ಗಸಗಸೆಯನ್ನು ಹಾಗೇ ಹಾಕಿ ಚೆನ್ನಾಗಿ ಕಲಸಿ ನಿಂಬೆ ಹಣ್ಣು ಗಾತ್ರದ ಉಂಡೆ ಕಟ್ಟಿ ಇಟ್ಟಿರಿ
- ಅಶ್ಟೇ ಕಣಕದ ಹಿಟ್ಟು ಹಿಡಿದು ಸ್ವಲ್ಪ ಲಟ್ಟಿಸಿ ಶೇಂಗಾ ಹೂರಣ ತುಂಬಿ
- ಕೈಗೆ ಎಣ್ಣೆ ಹಚ್ಚಿಕೊಂಡು ಕಣಕ ಮತ್ತು ಶೇಂಗಾ ಹೂರಣವನ್ನು ಮೆಲ್ಲಗೆ ತಟ್ಟುತ್ತಾ ದೊಡ್ಡದು ಮಾಡಿ/ಲಟ್ಟಿಸಿರಿ.
- ಬಿಸಿ ತವೆಯ ಮೇಲೆ, ಸ್ವಲ್ಪ ಎಣ್ಣೆ ಹಚ್ಚಿ ಎರಡೂ ಬದಿ ಬೇಯಿಸಿರಿ.
- ಶೇಂಗಾ ಹೋಳಿಗೆ ಈಗ ಸವಿಯಲು ಸಿದ್ದ.
ಶೇಂಗಾ ಹೋಳಿಗೆಯನ್ನು ತುಪ್ಪದ ಜೊತೆ ತಿನ್ನಲು ಕೊಡಿ. ಈ ಹೋಳಿಗೆಯನ್ನು ಎರಡು ವಾರ ಇಟ್ಟು ಕೂಡ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು