ಹಣ್ಣಿನ ಸಲಾಡ್

– ಸವಿತಾ.

ಬೇಕಾಗುವ ಸಾಮಾನುಗಳು

  • ಕತ್ತರಿಸಿದ 2-3 ತರಹದ ಹಣ್ಣುಗಳು 3 ಬಟ್ಟಲು (ಸೇಬು, ಬಾಳೆಹಣ್ಣು, ಸೀಬೆಹಣ್ಣು, ದ್ರಾಕ್ಶಿ ಇತ್ಯಾದಿ)
  • ಕತ್ತರಿಸಿದ ಒಣ ಹಣ್ಣುಗಳು – 1 ಬಟ್ಟಲು (ಗೋಡಂಬಿ, ಒಣ ದ್ರಾಕ್ಶಿ, ಬಾದಾಮಿ, ಅಕ್ರೋಡ)
  • ಕತ್ತರಿಸಿದ ಒಣ ಕರ‍್ಜೂರ – 10
  • ಹಾಲು – 2 ಬಟ್ಟಲು
  • ಕಾರ‍್ನ್ ಪ್ಲೋರ್ – 4 ಚಮಚ
  • ನೀರು – 1/2 ಲೋಟ
  • ಕೋಕೋ ಪುಡಿ – 6 ಚಮಚ
  • ಸಕ್ಕರೆ ಅತವಾ ಬೆಲ್ಲ – 3 ಚಮಚ
  • ಏಲಕ್ಕಿ – 2
  • ಲವಂಗ – 2
  • ಚಕ್ಕೆ – 1/2 ಇಂಚು

ಮಾಡುವ ಬಗೆ

ನೀರು ಬಿಸಿ ಮಾಡಿ ಅದರಲ್ಲಿ ಕಾರ‍್ನ್ ಪ್ಲೋರ್ ಕಲಸಿ, ಹಾಲು ಸೇರಿಸಿ ಬಿಸಿ ಮಾಡಲು ಇಡಿ. ಗಂಟು ಆಗದಂತೆ ನೋಡಿಕೊಂಡು ಕಲಸಿ ಕುದಿಸಿರಿ. ನಂತರ ಕೋಕೋ ಪುಡಿ ಸೇರಿಸಿ. ಒಣ ಕರ‍್ಜೂರ ಸಣ್ಣಗೆ ಕತ್ತರಿಸಿ ಹಾಕಿ, ಒಂದು ಕುದಿ ಬಂದ ನಂತರ ಒಲೆ ಆರಿಸಿ. ಸಕ್ಕರೆ ಅತವಾ ಬೆಲ್ಲ ಹಾಕಿ.

ಕತ್ತರಿಸಿದ ಹಣ್ಣು ಮತ್ತು ಒಣ ಹಣ್ಣುಗಳನ್ನು ಹಾಕಿ. ಏಲಕ್ಕಿ, ಲವಂಗ, ಚಕ್ಕೆ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ತಿರುಗಿಸಿ ಬಟ್ಟಲಿನಲ್ಲಿ ಹಾಕಿ ಇಟ್ಟುಕೊಳ್ಳಿ. ಮೇಲೆ ಕೊಕೊ ಪುಡಿ ಹಾಕಿದರೆ ಹಣ್ಣಿನ ಸಲಾಡ್ ಸವಿಯಲು ಸಿದ್ದ. ಕೊಕೊ ಪುಡಿ ಇಲ್ಲದಿದ್ದರೇ ಚಾಕೊಲೇಟ್ ಮುರಿದು ತುಂಡು ಹಾಕಿಯೂ ಮಾಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: