ಮೆದುಳು – ಒಂದಶ್ಟು ವಿಶಯಗಳು

– ಡಾ. ರಾಮಕ್ರಿಶ್ಣ ಟಿ.ಎಮ್.

ಮೆದುಳು ಮತ್ತು ನರಮಂಡಲ

ಮೆದುಳು ಮತ್ತು ಮೆದುಳು ಬಳ್ಳಿ (spinal cord) ಒಟ್ಟುಗೂಡಿ ಮಾನವ ದೇಹದ ಕೇಂದ್ರ ನರಮಂಡಲವಾಗಿದೆ (Central Nervous System). ಕೇಂದ್ರ ನರಮಂಡಲವು ನ್ಯೂರಾನ್ ಕೋಶ ಮತ್ತು ಗ್ಲೀಯ(glia)  ಕೋಶಗಳಿಂದ ಮಾಡಲ್ಪಟ್ಟಿರುತ್ತವೆ. ಪ್ರತಿ ನ್ಯೂರಾನ್‍ನಲ್ಲಿ ಸುಮಾರು 10000 ಡೆಂಡ್ರೈಟ್‍ಗಳು ಮತ್ತು ಒಂದು ಏಕ್ಸಾನ್ ಇರುತ್ತದೆ. ನ್ಯೂರಾನ್‍ ಕೋಶಗಳು, ಡೆಂಡ್ರೈಟ್‍ಗಳಿಂದ ಒಳಬಂದ ವಿಶಯವನ್ನು ಏಕ್ಸಾನ್ (axon) ಮುಕಾಂತರ ಇನ್ನೊಂದು ಕೋಶಕ್ಕೆ ವರ‍್ಗಮಾಡುತ್ತವೆ. ಈ ಏಕ್ಸಾನ್, ನ್ಯೂರಾನ್ ಕೋಶಕ್ಕಿಂತ ಸಾವಿರಾರು ಪಟ್ಟು ಉದ್ದವಿರುತ್ತದೆ. ಜಿರಾಪೆಯ ನ್ಯೂರಾನಿನ ಉದ್ದ 4.5 ಮೀಟರ್ ಇರುತ್ತದೆ!

ವಿದ್ಯುತ್ ಸ್ವಿಚ್‍ಗಳಂತೆ ಕೆಲಸ ಮಾಡುವ ಸಿನಾಪ್ಸ್ಗಳು

ಏಕ್ಸಾನ್ ಮತ್ತು ಡೆಂಡ್ರೈಟ್ ಸೇರುವ ಸ್ತಳಕ್ಕೆ ಸಿನಾಪ್ಸ್ (synapse) ಎಂದು ಹೇಳುತ್ತಾರೆ. ಅಲ್ಲಿ ವಿದ್ಯುನ್ಮಾನ ಸೂಚನೆಗಳು (electric signals) ರಾಸಾಯನಿಕಗಳಾಗಿ ಬದಲಾಗುತ್ತವೆ. ಈ ಸಿನಾಪ್ಸ್‍ಗಳು ವಿದ್ಯುತ್ ಸ್ವಿಚ್‍ ಗಳಂತೆ, ನ್ಯೂರಾನ್‍ಗಳ ಮುಕಾಂತರ ಚಲಿಸುವ ವಿಶಯಗಳ ಜೋಡಣೆ ಕೆಲಸ ಮಾಡುತ್ತವೆ.

ನ್ಯೂರಾನ್‍ಗಳನ್ನು ಸಂಬಾಳಿಸುವ  ಗ್ಲೀಯಗಳು

ಗ್ಲೀಯ ಕೋಶಗಳು ಮೆದುಳಿಗೆ ಒಂದು ರಚನೆಯನ್ನು ಕೊಡುತ್ತವೆ. ಇವು ನ್ಯೂರಾನ್‍ಗಳನ್ನು ಸಂಬಾಳಿಸುತ್ತವೆ ಮತ್ತು ನ್ಯೂರಾನ್‍ಗಳು ಸತ್ತಮೇಲೆ ಸ್ವಚ್ಚತಾ ಕೆಲಸ ಮಾಡುತ್ತವೆ. ಗ್ಲೀಯ ಕೋಶಗಳ ಸಂಕ್ಯೆ ನ್ಯೂರಾನ್‍ಗಳಿಗಿಂತ ಸುಮಾರು ಐವತ್ತು ಪಟ್ಟು ಹೆಚ್ಚಿರುತ್ತವೆ. ಮೆದುಳಿನಲ್ಲಿ 200 ಬಿಲಿಯಗಳಶ್ಟು ನ್ಯೂರಾನ್‍ಗಳಿವೆ. ಅವುಗಳನ್ನು ಒಂದಕ್ಕೊಂದು ಜೋಡಿಸಿದರೆ ಅದರ ಉದ್ದ 30 ಮಿಲಿಯ ಮೈಲಿಗಳಶ್ಟು ಇರುತ್ತದೆ ಮತ್ತು ಒಂದು ಕ್ವಾಡ್ರಿಲಿಯನ್ ಗಳಶ್ಟು (1000,000,000,000,000) ಸಿನಾಪ್ಸ್‍ಗಳಿರುತ್ತವೆ.

ಮೆದುಳಿನ ಎಶ್ಟು ಬಾಗ ಬಳಕೆಯಾಗುತ್ತದೆಂದು ಗೊತ್ತೇ?

ಮೆದುಳಿನ ಶಕ್ತಿಯ ಶೇಕಡಾ ಹತ್ತು (10%) ಬಾಗ ಮಾತ್ರ ಬಳಕೆಯಾಗುತ್ತದಂತೆ! ಮೆದುಳಿನ ಎಲ್ಲಾ ಬುದ್ದಿಶಕ್ತಿಯನ್ನು ಬಳಸುವುದಾದರೆ ಮೆದುಳು, ಒಂದು ಅಗಾದ ಶಕ್ತಿಯ ಕೇಂದ್ರವಾಗುವುದೆಂದು ಸುಳುವಾಗಿ ತಿಳಿಯುವಂತದು.  ನಮ್ಮ ದೇಹದಲ್ಲಿರುವ ಎಲ್ಲಾ ನ್ಯೂರಾನ್‍ಗಳನ್ನು ಹರಡಿದರೆ ಒಂದು ಪುಟ್‍ಬಾಲ್ ಮೈದಾನವನ್ನು ಆವರಿಸುವಶ್ಟಾಗುತ್ತದೆ.  ಅಂದರೆ 25000 ಚದರ ಮೀಟರ್‍ಗಳಶ್ಟು! ನಮ್ಮ ಯೋಚನಾಶಕ್ತಿಗೆ, ಮೆದುಳಿನ ಶೇಕಡ 10 ಬಾಗ ಮಾತ್ರ ಬಳಕೆಯಾಗುತ್ತದೆ. ಉಳಿದ ಶೇಕಡಾ 90 ಬಾಗ ಬಳಸುವ ಶಕ್ತಿ ನಮಗೆ ಕೂಡಿ ಬಂದಿಲ್ಲವಶ್ಟೇ!

( ಚಿತ್ರ ಸೆಲೆ: kids.nationalgeographic.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks