ಸಿಹಿಗೆ ಮತ್ತೊಂದು ಹೆಸರು ‘ಕುಂದಾ’

–  ಸವಿತಾ.

ಕುಂದಾ Kunda sweet

ಬೇಕಾಗುವ ಪದಾರ‍್ತಗಳು

1/2 ಲೀಟರ್ ಹಾಲು ಇಲ್ಲವೇ ಎರಡು ಲೋಟ ಹಾಲು
1/2 ಲೋಟ ಮೊಸರು
1/2 ಲೋಟ ಸಕ್ಕರೆ
4 ಏಲಕ್ಕಿ

ಮಾಡುವ ಬಗೆ

ಹಾಲನ್ನು ಒಂದು ಪಾತ್ರೆಗೆ ಹಾಕಿ 10 ರಿಂದ 15 ನಿಮಿಶ ಕುದಿಸಿ. ಬಳಿಕ ಮೊಸರು ಸೇರಿಸಿ ಸಣ್ಣ ಉರಿಯಲ್ಲಿ ಅಂದಾಜು ಅರ‍್ದ ಗಂಟೆ ಕುದಿಸಿ.
ಇನ್ನೊಂದು ಕಡೆ 1/4 ಲೋಟ ಸಕ್ಕರೆಯನ್ನು ಚಿಕ್ಕ ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿಟ್ಟು ಕರಗಿಸಿ. ಹೀಗೆ ಸಕ್ಕರೆಯನ್ನು ಕರಗಿಸುವಾಗ ನೀರು ಹಾಕಬಾರದು. ಕೆಂಪು ಬಣ್ಣಕ್ಕೆ ತಿರುಗಿದ ಸಕ್ಕರೆ ಪಾಕವನ್ನು ಕುದಿಯುವ ಹಾಲು-ಮೊಸರಿನ ಮಿಶ್ರಣಕ್ಕೆ ಸೇರಿಸಿ, ಚೆನ್ನಾಗಿ ತಿರುಗಿಸಿ. ಸಕ್ಕರೆ ಪಾಕ ಹಾಕಿದಂತೆ ಹಾಲು-ಮೊಸರಿನ ಮಿಶ್ರಣ ಗಟ್ಟಿಯಾಗುತ್ತಾ ಬರುತ್ತದೆ. ಬಳಿಕ ಉಳಿದ ಕಾಲು ಲೋಟ ಸಕ್ಕರೆಯನ್ನು ಸೇರಿಸಿ, ಮಿಶ್ರಣವು ನಿಮಗೆ ಬೇಕಾದ ಹದಕ್ಕೆ ಗಟ್ಟಿಯಾಗುವ ತನಕ ಚೆನ್ನಾಗಿ ತಿರುಗಿಸುತ್ತಿರಿ.

ಕೊನೆಯಲ್ಲಿ ಪುಡಿಮಾಡಿದ ಏಲಕ್ಕಿಯನ್ನು ಉದುರಿಸಿ ಇನ್ನೊಮ್ಮೆ ಕೈಯಾಡಿಸಿ ಒಲೆಯಿಂದ ಕೆಳಗಿಳಿಸಿ. ಈಗ ರುಚಿಯಾದ ಸಿಹಿ ತಿನಿಸು ಕುಂದಾ ಸವಿಯಲು ಸಿದ್ದ.

(ಚಿತ್ರ ಸೆಲೆ: ಸವಿತಾ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: