ಬೀಟ್‍ರೂಟ್ ಚಟ್ನಿ

– ಕಲ್ಪನಾ ಹೆಗಡೆ.

ಬೇಕಾಗುವ ಸಾಮಗ್ರಿಗಳು

  • ಬೀಟ್‍ರೂಟ್ – 1 ಅತವಾ 2
  • ಕಾಯಿತುರಿ – ಕಾಲು ಹೋಳು
  • ಉದ್ದಿನಬೇಳೆ – 2 ಚಮಚ
  • ಕಡ್ಲೆಬೇಳೆ – 2 ಚಮಚ
  • ಓಂಕಾಳು – ಕಾಲು ಚಮಚ
  • ಎಳ್ಳು – ಕಾಲು ಚಮಚ
  • ಹಸಿಮೆಣಸಿನಕಾಯಿ – 4
  • ಇಂಗು
  • ಕರಿಬೇವು

ಮಾಡುವ ವಿದಾನ

ಮೊದಲು ಬೀಟ್‍ರೂಟ್ಅನ್ನು ಹೆಚ್ಚಿ ಬೇಯಿಸಿಟ್ಟುಕೊಳ್ಳಿ. ಒಂದು ಬಾಣಲೆಗೆ ಸ್ವಲ್ಪ ಎಣ್ಣೆ, ಉದ್ದಿನಬೇಳೆ, ಕಡ್ಲೆಬೇಳೆ, ಓಂಕಾಳು, ಎಳ್ಳು, ಮೆಣಸಿನಕಾಯಿ, ಇಂಗು ಹಾಕಿ ಹುರಿಯಿರಿ. ಇದರ ಜೊತೆಗೆ ಕಾಯಿತುರಿ, ಕಾಲುಚಮಚ ಹುಣಸೆ ಹಣ್ಣಿನ ರಸ, ನೀರು ಹಾಕಿ ರುಬ್ಬಿ ಒಂದು ಪಾತ್ರೆಗೆ ಹಾಕಿಕೊಳ್ಳಿ. ಆನಂತರ ಬೇಯಿಸಿಟ್ಟ ಬೀಟ್‍ರೂಟ್ಅನ್ನು ಮಿಕ್ಸಿಯಲ್ಲಿ ರುಬ್ಬಿ, ರುಬ್ಬಿದ ಮಸಾಲೆಗಳ ಪಾತ್ರೆಗೆ ಹಾಕಿ ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಸೌಟಿನಿಂದ ಕಲಸಿಕೊಳ್ಳಿ. ಆಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಸೇರಿಸಿಕೊಳ್ಳಿ.

ನೀವು ತಯಾರಿಸಿದ ಬೀಟ್‍ರೂಟ್ ಚಟ್ನಿಯನ್ನು ಅನ್ನ ಅತವಾ ಚಪಾತಿಯೊಂದಿಗೆ ಸವಿಯಲು ನೀಡಿ.

(ಚಿತ್ರ ಸೆಲೆ: pixabay.comಕಲ್ಪನಾ ಹೆಗಡೆ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: