ಮರೆಯದಿರಿ ತಾಯಿಯ ತ್ಯಾಗವನ್ನು

– ಚೇತನ್ ಬುಜರ‍್ಕಾರ್.

ಪ್ರೀತಿಯೆಂಬ ಮಾಯೆಯ
ಬಲೆಯೊಳಗೆ ಬಿದ್ದಾಗ
ಮರೆಯದಿರಿ ತಾಯಿ ಕೊಟ್ಟ ಪ್ರೀತಿಯನ್ನು

ಸೌಂದರ‍್ಯದ ಸೆಳೆತಕ್ಕೆ ಸಿಲುಕಿ
ಜಿಂಕೆಯಂತೆ ಜಿಗಿಯುವಾಗ
ಮರೆಯದಿರಿ ಜನ್ಮ ಕೊಡುವಾಗ
ತಾಯಿ ಕಟ್ಟಿದ್ದ ಕನಸುಗಳನ್ನು

ಅವಳಿಗೆ ಪ್ರೇಮಗೀತೆ
ಹಾಡಿ ಕುಶಿಪಡಿಸುವಾಗ
ಮರೆಯದಿರಿ ಅಮ್ಮ ನಿದ್ರೆಗೆ
ಹಾಡುತ್ತಿದ್ದ ಲಾಲಿಯ ಹಾಡನ್ನು

ಅವಳು ಹೋದರೆ
ಮತ್ತೊಬ್ಬಳು ಸಿಗಬಹುದೇನೋ
ಆದರೆ ಮರೆಯದಿರಿ
ಯಾರು ಬದಲಾಯಿಸಲಾಗುವುದಿಲ್ಲ
ತಾಯಿಯ ಸ್ತಾನವನ್ನು

ಅವಳು ಕೈ ಕೊಟ್ಟಾಗ
ಕಣ್ಣೀರ ವ್ಯರ‍್ತ ಮಾಡುವಾಗ
ಮರೆಯದಿರಿ ಬೂಮಿಗೆ
ಪರಿಚಯಿಸುವಾಗ ತಾಯಿ
ಅನುಬವಿಸಿದ ನೋವನ್ನು

ಪ್ರೀತಿಸುವುದು ತಪ್ಪಲ್ಲ
ಪ್ರೀತಿಸಿ, ಆದರೆ ಪ್ರೀತಿಸುವಾಗ
ಮರೆಯದಿರಿ ತಾಯಿಯ ತ್ಯಾಗವನ್ನು

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: