ಹಚ್ಚಿದ (ಚೂಡಾ) ಅವಲಕ್ಕಿ
– ಸವಿತಾ.
ಏನೇನು ಬೇಕು?
- 2 ಲೋಟ ಅತವಾ 1/2 ಕೆ ಜಿ ತೆಳು ಅವಲಕ್ಕಿ
- 4 ಚಮಚ ಎಣ್ಣೆ
- 2 ಚಮಚ ಕಡಲೆಬೀಜ
- 2 ಚಮಚ ಹುರಿಗಡಲೆ
- 2 ಚಮಚ ಒಣದ್ರಾಕ್ಶಿ
- 1 ಚಮಚ ಜೀರಿಗೆ
- 1 ಚಮಚ ಸಾಸಿವೆ
- 10 ಚಮಚ ಒಣ ಕೊಬ್ಬರಿ ತುರಿ ಅತವಾ ತೆಳು ಹೋಳುಗಳು
- 1 ಚಮಚ ಉಪ್ಪು
- 1/2 ಚಮಚ ಸಕ್ಕರೆ
- 1/2 ಚಮಚ ಅರಿಶಿಣ
- 1/2 ಚಮಚ ಇಂಗು
- 10 ಗೋಡಂಬಿ
- 2 ಒಣಮೆಣಸಿನಕಾಯಿ
- 2 ಹಸಿಮೆಣಸಿನಕಾಯಿ
- 10-15 ಕರಿಬೇವಿನ ಎಸಳು
ಮಾಡುವ ಬಗೆ
- ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ 4-5 ತಾಸು ಇಟ್ಟು ಒಣಗಿಸಿಕೊಳ್ಳಿ
- ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಣ್ಣ ಉರಿಯಲ್ಲಿ ಇಟ್ಟು ಒಗ್ಗರಣೆ ಹಾಕಿರಿ
- ಮೊದಲು ಸಾಸಿವೆ , ಜೀರಿಗೆ ನಂತರ ಕರಿಬೇವು , ಇಂಗು , ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಗೂ ಒಣಮೆಣಸಿನಕಾಯಿ ಮುರಿದು ಹಾಕಿ ಕೈಯಾಡಿಸಿ
- ತೆಳ್ಳಗೆ ಕತ್ತರಿಸಿದ ಒಣ ಕೊಬ್ಬರಿ ಚೂರುಗಳನ್ನು ಅತವಾ ಒಣ ಕೊಬ್ಬರಿ ತುರಿಯನ್ನು ಹಾಕಿ, ಕೈಯಾಡಿಸಿ
- ಕಡಲೆಬೀಜ , ಹುರಿಗಡಲೆ , ಒಣದ್ರಾಕ್ಶಿ ಮತ್ತು ಗೋಡಂಬಿ ಚೂರು ಮಾಡಿ ಹಾಕಿ ಹುರಿಯಿರಿ.
- ಕೊನೆಗೆ ಸಕ್ಕರೆ , ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ .
- ನಂತರ ತೆಳು ಅವಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಂಡರೆ ಸಂಜೆ ತಿನ್ನಲು ಹಚ್ಚಿದ ಅವಲಕ್ಕಿ/ ಚೂಡಾ ಅವಲಕ್ಕಿ ರೆಡಿ.
ಡಬ್ಬದಲ್ಲಿ ಎತ್ತಿಟ್ಟು, ಯಾವಾಗ ಬೇಕಾದರೂ ತಿನ್ನಬಹುದು 🙂
ಇತ್ತೀಚಿನ ಅನಿಸಿಕೆಗಳು