ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ

– ವೆಂಕಟೇಶ.ಪಿ ಮರಕಂದಿನ್ನಿ.

ದಾರಿಬಿಡಿ ಹೊರಟಿದ್ದೇನೆ ದೆಹಲಿಗೆ
ಬೇಗ ಬಿಡಿ ಹೊರಟಿರುವೆನು ಹೊಗೆರಾಜನ ಮಹಲಿಗೆ

ಅವಸರದಿ ಹೆಜ್ಜೆಹಾಕುತ್ತಾ
ದಿನಸಿ ಸಾಮಾನಿನ ಲಿಸ್ಟು ಎಣಿಸುತ್ತ
ನನ್ನ ಶ್ವಾಸಕ್ಕೆ ದೂಳು ದುಮ್ಮಗಳನು ಗುಣಿಸುತ್ತ
ಹೊರಟಿಹೆನು ಸಕ್ಕರೆ ಚಹಾ ಪುಡಿ ತರಲು ದೂಮಲೀಲೆಗಳ ಕವಲಿಗೆ

ಬೇರೆ ಎಲ್ಲೂ ಇಲ್ಲ ದೆಹಲಿ
ಇದೆ ನಮ್ಮನೆ ಹಿಂದಿನ ಬೀದಿಲಿ
ಬಿಂಬಿತವಾಗುತ್ತಿದೆ ನನ್ನ ಊರು ದೆಹಲಿಯ ಹಾಗೆ
ಗ್ರೀನ್ ಸಿಗ್ನಲ್ಲು ಕೊಡುತಿದೆ ಮತ್ತಶ್ಟು ಕರಿ ಬಣ್ಣ ಬಳಿದುಕೊಂಡು ಕಾಗೆ

ದೆಹಲಿಯ ದೇಹಕೆ ಬಂದಿದೆ ಆಪತ್ತು
ಇನ್ನೇನು ನನ್ನ ಊರಿಗೂ ಸನಿಹ ಈ ಕುತ್ತು
ಪ್ರತಿಯೊಂದು ಮನೆಗು ಲಗ್ಗೆ ಇಟ್ಟಿದೆ ಹೊಗೆಯುಗುಳುವ ಬೈಕು
ಪರಿಸರ ದಿನದಂದೆ ಹೊಗೆಸೂಸುತ ನಡೆಸಿದೆ ಸ್ಟ್ರೈಕು

ದ್ವಿಚಕ್ರ, ನಾಲ್ಕುಚಕ್ರ ಇನ್ನೂ ಹಲವಾರು ಚಕ್ರ
ಕೊನೆಗು ಬರಿಸಿ ತಲೆಗೆ ಚಕ್ರ
ಬೂಗೋಳವನೆ ತಿರುಗಿಸಿ ವಕ್ರ
ಸಮಾವೇಶ ಕೋಮುದ್ವೇಶ ಏನೇ ಇರಲಿ ತನ್ನ ಹೊಸ ಅವತಾರವಂತೆ ರ‍್ಯಾಲಿ

ಆದರೇನಂತೆ ಪೆಟ್ರೋಲು ಕಾಲಿ
ರೊಕ್ಕ ಇರೊ ಜನ ಮಾಡ್ತಾರೆ ಜಾಲಿ
ಬಳಕೆಯಾಗಬೇಕಿದೆ ಸೀಸ ರಹಿತ ಪೆಟ್ರೋಲು
ಸಿ.ಎನ್.ಜಿ ಗ್ಯಾಸ್, ಕ್ಯಾಟಲೈಟಿಕ್ ಕನ್ವರ‍್ಟರಿನಿಂದ ಮಾಲಿನ್ಯ ಆಗಬೇಕು ಕಂಟ್ರೋಲು

ಒತ್ತು ನೀಡಬೇಕೆಲ್ಲ ಸಾರ‍್ವಜನಿಕ ಸಾರಿಗೆಗೆ
ವಾಯು ಮಾಲಿನ್ಯ ಗುಡಿಸುವ ಬಾರಿಗೆಗೆ
ಶುದ್ದವಾಗಲಿ ವಾಯು
ಹೆಚ್ಚಾಗಲಿ ನಮ್ಮ ಆಯು

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: