ಜೀವದ ಸಂಗಾತಿಯೇ

– ಸ್ಪೂರ‍್ತಿ. ಎಂ.

ಜೊತೆಗಾರ, ಸಂಗಾತಿ, partner

ಎನ್ನೊಳಗೆ ಹುದುಗಿರುವೆ ನೀ ಸಾಹಿತಿ
ಎನಗರಿವಿಲ್ಲದೆ ನೀನಾದೆ ನನ್ನ ಸಂಗಾತಿ

ಬಾವನೆಗಳ ಹಂಚಿಕೊಳ್ಳುತ ನೆಮ್ಮದಿಯ ನೀಡಿರುವೆ
ದಿಕ್ಕೆಟ್ಟ ಬದುಕಿನ ದಿಕ್ಕನ್ನೇ ಬದಲಿಸಿರುವೆ

ಬುದ್ದಿ ಬಾವಗಳ ಬೆರಸಿ ಸಾಹಿತ್ಯವ ಹೆತ್ತಿರುವೆ
ಕಶ್ಟದಲ್ಲಿ ಕೈ ಹಿಡಿದು ಕೀರ‍್ತಿಯನ್ನು ನೀಡಿರುವೆ

ಈ ನಿರ‍್ಗತಿಕ ಬಾಳಿಗೆ ಬೆಳಕಾಗಿ ಬಂದಿರುವೆ
ನಾ ಮಡಿದ ಮೇಲೂ ನಿನ್ನೊಳಗೆ ಉಳಿಸಿಕೊಳ್ಳುವೆ

ಜೀವದ ಸಂಗಾತಿಯೇ, ನಿನ್ನ ಬಿಟ್ಟಿರಲಾರೆ
ಕಡೆವರೆಗೂ ಕೈ ಬಿಡದೆ ಕಾಯುತಿರು ದೇವರೆ

(ಚಿತ್ರ ಸೆಲೆ: goodfreephotos.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.