ಕೆಸುವಿನ ಸೊಪ್ಪಿನ ಕರಕಲಿ
– ಕಲ್ಪನಾ ಹೆಗಡೆ.
ಏನೇನು ಬೇಕು?
- ಕೆಸುವಿನ ಸೊಪ್ಪು
- ಕಾಳು ಮೆಣಸು – 10
- ಕಾಯಿತುರಿ – ¼ ಹೋಳು
- ಹಸಿಮೆಣಸಿನಕಾಯಿ – 4
- ಇಂಗು – ಚಿಟಿಕೆ
- ಬೆಳ್ಳುಳ್ಳಿ – 10 ಎಸಳು
- ಕರಿಬೇವು
- ಎಣ್ಣೆ
ಮಾಡೋದು ಹೇಗೆ?
ಮೊದಲು ಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಕಾದ ನಂತರ ಸಾಸಿವೆ ಕಾಳು ಸೇರಿಸಿ ಹುರಿದು, ಸೊಪ್ಪು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹಸಿಮೆಣಸಿನಕಾಯಿ, ಕಾಳು ಮೆಣಸು, ಇಂಗು ಹಾಕಿ ಹುರಿಯಿರಿ. ಇದಕ್ಕೆ ಕಾಯಿ ತುರಿ ಸೇರಿಸಿ ರುಬ್ಬಿ, ಬೇಯಿಸಿದ ಸೊಪ್ಪಿಗೆ ಹಾಕಿ ಕುದಿಸಿಕೊಳ್ಳಿ. ಆಮೇಲೆ ರುಚಿಗೆ ತಕ್ಕಶ್ಟು ಉಪ್ಪು, ನಿಂಬೆಹಣ್ಣಿನ ರಸ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಎಣ್ಣೆ, ಸಾಸಿವೆ, ಇಂಗು, ಜಜ್ಜಿದ ಬೆಳ್ಳುಳ್ಳಿ, ಕರಿಬೇವು ಹಾಕಿ ಒಗ್ಗರಣೆ ಹಾಕಿ ಕಲಸಿ. ಕೆಸುವಿನ ಸೊಪ್ಪಿನ ಕರಕಲಿ ಸವಿಯಲು ತಯಾರು.
ಕೆಸುವಿನ ಸೊಪ್ಪಿನ ಕರಕಲಿಯನ್ನು ಅನ್ನದೊಂದಿಗೆ ಸವಿಯಲು ನೀಡಿ. ಚಪಾತಿಗೂ ನೆಂಚಿಕೊಳ್ಳಬಹುದು.
(ಕರಕಲಿ = ಗೊಜ್ಜು)
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು