ಕರುನಾಡ ವೈಬವ
– ಶಾಂತ್ ಸಂಪಿಗೆ.
ಕನ್ನಡ ನಾಡಿನ ಪುಣ್ಯದ ಮಡಿಲಲಿ
ಜನಿಸಿದ ಮಕ್ಕಳು ನಾವೆಲ್ಲ
ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ
ಹೆಮ್ಮೆಯು ಇರಲಿ ನಮಗೆಲ್ಲ
ಬೂಮಂಡಲದಲಿ ಸ್ವರ‍್ಗವ ನಾಚಿಸೋ
ಹಸಿರಿನ ವನಸಿರಿ ಬಯಲಲ್ಲಿ
ಬೋರ‍್ಗರೆಯುವ ನದಿಗಳ ನಾದ
ತುಂಬಿದೆ ಸಂತಸ ಮನದಲ್ಲಿ
ವಿಸ್ಮಯವಾದ ಜೀವರಾಶಿಗಳು
ಕೂಡಿ ಬಾಳುತಿವೆ ವನದಲ್ಲಿ
ರೆಕ್ಕೆಯ ಬಿಚ್ಚಿ ಹಾರಿವೆ ಹಕ್ಕಿ
ಸ್ರುಶ್ಟಿಸಿ ಕಲರವ ಮುಗಿಲಲ್ಲಿ
ಬೆಟ್ಟವ ಹತ್ತಿ ಬೆವರನು ಇಳಿಸಿ
ದುಡಿಯುತ ಬಾಳುವ ಜನರಿಲ್ಲಿ
ಮೋಸ ವಂಚನೆ ಸ್ವಾರ‍್ತವು ಇಲ್ಲ
ಸ್ವರ‍್ಗದಂತಿದೆ ದರೆಯಿಲ್ಲಿ
ಕರುಣೆಯು ತುಂಬಿದ ಜನರಿಲ್ಲಿ
ನಡೆಸುವರಲ್ಲ ಕೈ ಹಿಡಿದು
ಕರುನಾಡಲಿ ನೆಲೆಸಿದ ಶಾಂತಿಯು
ದೊರಕಲಿ ಜಗಕೆಲ್ಲ ಎಂದು
ಸಾದು ಸಂತರು ನಾಡಿಗೆ ನೀಡಿದ
ಗ್ನಾನದ ಬೆಳಕಿದೆ ನಮಗೆಲ್ಲ
ದೈರ‍್ಯ ಸಾಹಸ ಶೌರ‍್ಯಕೆ ಹೆಸರು
ಗಂಡು-ಹೆಣ್ಣೆಂಬ ಬೇದವು ಇಲ್ಲ
ಶಿಲ್ಪ ಕಲೆಗಳು ನ್ರುತ್ಯ ಶಿಲೆಗಳು
ಸಾರಿವೆ ನಾಡಿನ ವೈಬವವ
ಒಂದುಗೂಡಲಿ ಎಲ್ಲ ಕೈಗಳು
ಕಟ್ಟಲು ಹೊಸ ಕರುನಾಡನ್ನ
(ಚಿತ್ರ ಸೆಲೆ: OneIndia Kannada)
ಇತ್ತೀಚಿನ ಅನಿಸಿಕೆಗಳು